ಆಸ್ಪತ್ರೆಯೊಳಗೆ ರಾಜಾರೋಷವಾಗಿ ತಿರುಗಾಡಿ, ರೋಗಿಯ ಆಹಾರವನ್ನು ತಿಂದ ಬೀದಿನಾಯಿ.

ಸಾಮಾನ್ಯವಾಗಿ ಆಸ್ಪತ್ರೆಗೆ ನಾವು ರೋಗಿಗಳ ಭೇಟಿಗೆ ಹೋಗುವಾಗ ಕೆಲವೊಂದು ನಿಯಮಗಳಿರುತ್ತವೆ. ಒಮ್ಮೆಗೆ ಸೀದಾ ನಾವು ಭೇಟಿ ಮಾಡಲು ವಾರ್ಡ್ ಗಳಿಗೆ ಹೋಗಲು ಆಗದಿರುವ ನಿಯಮಗಳು ಕೆಲ ಆಸ್ಪತ್ರೆಯಲ್ಲಿರುತ್ತವೆ. ಆದರೆ ಇಲ್ಲೊಂದು ಆಸ್ಪತ್ರೆಯೊಳಗೆ ಬೀದಿ ನಾಯಿಯೊಂದು ರಾಜಾರೋಷವಾಗಿ ತಿರುಗಾಡಿದೆ.
ನಾಯಿಯೊಂದು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಆಹಾರ ತಿನ್ನುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಾಯಿಯೊಂದು ಆಸ್ಪತ್ರೆಯೊಳಗೆ ಬಂದಿರುವುದು ಮಾತ್ರವಲ್ಲದೆ ರೋಗಿಯೊಬ್ಬರ ಬೆಡ್ ಪಕ್ಕಕ್ಕೆ ಬಂದು ಆಹಾರ ಮತ್ತು ಹಾಲು ಸೇವಿಸಿದೆ. 30 ಸೆಕೆಂಡ್ ಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
















Leave a Reply