ಮೀನಿನ ಲಾರಿಗೆ ಸ್ಕೂಟರ್‌ ಢಿಕ್ಕಿ; 21ರ ಹರೆಯದ ಯುವಕ ಮೃತ್ಯು

ಮೀನಿನ ಲಾರಿಗೆ ಸ್ಕೂಟರ್‌ ಢಿಕ್ಕಿ; 21ರ ಹರೆಯದ ಯುವಕ ಮೃತ್ಯು

ಉಳ್ಳಾಲ: ರಾ.ಹೆ.66ರ ನೇತ್ರಾವತಿ ಸೇತುವೆಯಲ್ಲಿ ಬುಧವಾರ (ಅ.11 ರಂದು) ನಸುಕಿನ ಜಾವ ಮೀನಿನ ಲಾರಿಗೆ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸವಾರ ಮೃತಪಟ್ಟ ಘಟನೆ ನಡೆದಿದೆ.

ಮೃತ ಸವಾರನನ್ನು ಮೂಲತಃ ಉಳ್ಳಾಲ ನಿವಾಸಿ ಪ್ರಸಕ್ತ ಕೋಟೆಕಾರ್‌ನಲ್ಲಿ ನೆಲೆಸಿರುವ ಹನೀಫ್ ಎಂಬವರ ಪುತ್ರ ಅಝ್‌ವೀನ್ (21) ಎಂದು ಗುರುತಿಸಲಾಗಿದೆ.

ದಕ್ಕೆಗೆ ಮೀನುಗಾರಿಕೆಯ ಕೆಲಸಕ್ಕೆಂದು ಅಝ್‌ವೀನ್ 3:30ರ ವೇಳೆಗೆ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ನೇತ್ರಾವತಿ ಸೇತುವೆಯಲ್ಲಿ ಮೀನಿನ ವಾಹನವೊಂದರ ಚಾಲಕ ಹಠಾತ್ ಬ್ರೇಕ್ ಹಾಕಿದಾಗ ಲಾರಿ ಹಿಂಭಾಗದಲ್ಲಿ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ಅಝ್‌ವೀನ್ ನಿಯಂತ್ರಣ ಕಳಕೊಂಡು ಮೀನು ಸಾಗಾಟದ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ.

ಗಂಭೀರ ಗಾಯಗೊಂಡಿದ್ದ ಅಝ್‌ವೀನ್ ಅವರನ್ಬು ಸ್ಥಳೀಯ ಆಸ್ಪತ್ರೆಗೆ ಸಾಗಿಸುವ ಮದ್ಯೆ ಮೃತಪಟ್ಟಿದ್ದಾರೆ. ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!