ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ INSPIRE AWARD MANAK ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಪೃಥ್ವಿರಾಜ್ ಪ್ರಭು

ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ INSPIRE AWARD MANAK ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿಪೃಥ್ವಿರಾಜ್ ಪ್ರಭು

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ 2023 ಅಕ್ಟೋಬರ್‌ 9 ರಿಂದ 11ರ ವರೆಗೆ ನವದೆಹಲಿಯಲ್ಲಿ ನಡೆಸಿದ 2021-22ನೇ ಸಾಲಿನ INSPIRE AWARD MANAK ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ ಪೃಥ್ವಿರಾಜ್ ಪ್ರಭು (ಮುಕ್ರಂಪಾಡಿ ನಿವಾಸಿ ಪುಂಡಲೀಕ ಪ್ರಭು ಹಾಗೂ ಶ್ರೀಮತಿ ನಾಗಮಣಿ ಪ್ರಭು ದಂಪತಿಗಳ ಪುತ್ರ) ಭಾಗವಹಿಸಿ, ತಮ್ಮ “Medicinal wax from Kokum seeds” (Ko-Wax) ವಿಜ್ಞಾನ ಯೋಜನೆಯನ್ನು ಪ್ರಸ್ತುತಪಡಿಸಿರುತ್ತಾರೆ.

ಪೃಥ್ವಿರಾಜ್ ಪ್ರಭು ಅವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವಾಗ ತಯಾರಿಸಿ, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆದರೆ ಆ ಶೈಕ್ಷಣಿಕ ವರ್ಷದಲ್ಲಿ ಕೊರೋನ ಕಾರಣದಿಂದಾಗಿ ಸ್ಪರ್ಧೆಗಳು ನಡೆಯದಿರುವ ಕಾರಣ ಮುಂದೂಡಲ್ಪಟ್ಟ ಸ್ಪರ್ಧೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆದಿದ್ದು, ಯಶಸ್ವಿಯಾಗಿ ಭಾಗವಹಿಸಿ, ಆಯೋಜಕರಿಂದ ಮೆಚ್ಚುಗೆ ಗಳಿಸಿರುತ್ತಾರೆ ಎಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Previous post

ಕೊಕ್ಕಡ: ಕಾವು ತ್ರಿಗುಣಾತ್ಮಿಕ ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿ ನವರಾತ್ರಿ ಉತ್ಸವ, ಶ್ರೀ ದೇವರಿಗೆ ರಜತ ಕವಚ ಸಮರ್ಪಣೆ

Next post

ಮೊಬೈಲ್ ನಲ್ಲಿ ಮಾತನಾಡುವುದನ್ನು ಪ್ರಶ್ನಿಸಿದ್ದಕ್ಕೆ ತಾಯಿ ಮೇಲೆ ಮಾರಣಾಂತಿಕ ಹಲ್ಲೆ

Leave a Reply

You May Have Missed

error: Content is protected !!