ಹಾಡಹಗಲೆ ಮಚ್ಚಿನಿಂದ ಕೊಚ್ಚಿ ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ಸದಸ್ಯನ ಕೊಲೆ

ಹಾಡಹಗಲೆ ಮಚ್ಚಿನಿಂದ ಕೊಚ್ಚಿ ಕಾಂಗ್ರೆಸ್‌ ಬೆಂಬಲಿತ ಗ್ರಾಪಂ ಸದಸ್ಯನ ಕೊಲೆ

ಹಾಡಹಗಲೆ ಗ್ರಾಮ ಪಂಚಾಯಿತಿ ಸದಸ್ಯನೊಬ್ಬನನ್ನು ಬರ್ಬರವಾಗಿ ರಸ್ತೆ ಮಧ್ಯೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ಘಟನೆ ಇಂದು (ಶನಿವಾರ) ನಾಲ್ಕು ಗಂಟೆ ಸುಮಾರಿಗೆ ನಡೆದಿದ್ದು, 40 ವರ್ಷದ ಅನಿಲ್ ಕೊಲೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯ.

ಮಿಣಸಂದ್ರ ಗ್ರಾಮದವರಾದ ಹಾಲಿ ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ಮೃತ ಅನಿಲ್ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯರಾಗಿದ್ದರು. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಳೆ ದ್ವೇಷದ ಹಿನ್ನೆಲೆ ಕೊಲೆ ಮಾಡಿರುವ ಸಾಧ್ಯತೆ ಇದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ.

ಮೀಣಸಂದ್ರ ಗ್ರಾಮದ ಅನಿಲ್ ಕುಮಾರ್ ದ್ವಿಚಕ್ರ ವಾಹನದಲ್ಲಿ ಲಕ್ಕೂರು ಗೇಟ್‌ಗೆ ಬರುತ್ತಿದ್ದಾಗ ಮದ್ಯ ದಾರಿಯಲ್ಲಿ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕ ಆಯುಧದಿಂದ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ನಾರಾಯಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬೆಲೆ ಬೀಸಿದ್ದಾರೆ.

Leave a Reply

You May Have Missed

error: Content is protected !!