ಬಸ್ ಢಿಕ್ಕಿ: ಜಾನುವಾರು ಸಾವು, ಇನ್ನೊಂದು ಗಂಭೀರ

ಬಸ್ ಢಿಕ್ಕಿ: ಜಾನುವಾರು ಸಾವು, ಇನ್ನೊಂದು ಗಂಭೀರ

ಕುಂದಾಪುರದಿಂದ ಮೈಸೂರು-ಮಂಡ್ಯ ತೆರಳುವ ದುರ್ಗಾಂಬಾ ಮೋಟಾರ್ಸ್ ಬಸ್ ಚಾಲಕನ ಧಾವಂತಕ್ಕೆ ಒಂದು ಹಸು ಸಾವನ್ನಪ್ಪಿ, ಇನ್ನೊಂದು ಗಂಭೀರ ಗಾಯಗೊಂಡಿರುವ ಘಟನೆ ಕೋಡಿಕಲ್ ಜಂಕ್ಷನ್ನಿನಲ್ಲಿ ತಡರಾತ್ರಿ ವೇಳೆ ಸಂಭವಿಸಿದೆ.

ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಬಸ್ ತಡೆದು ಚಾಲಕನನ್ನು ತರಾಟೆಗೆತ್ತಿಕೊಂಡಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Leave a Reply

You May Have Missed

error: Content is protected !!