ಬಿಗ್‌ಬಾಸ್‌ ಮನೆಯಿಂದ ಹೊರವಿರುವ ಪಾರ್ಟನರ್‌ ಬಗ್ಗೆ ಸತ್ಯ ಬಿಚ್ಚಿಟ್ಟ ಸಂಗೀತಾ ಶೃಂಗೇರಿ

ಬಿಗ್‌ಬಾಸ್‌ ಮನೆಯಿಂದ ಹೊರವಿರುವ ಪಾರ್ಟನರ್‌ ಬಗ್ಗೆ ಸತ್ಯ ಬಿಚ್ಚಿಟ್ಟ ಸಂಗೀತಾ ಶೃಂಗೇರಿ

ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಇವರಿಬ್ಬರ ವರ್ತನೆ ನೋಡಿದ್ರೆ ದೊಡ್ಮನೆಯಲ್ಲಿ ಇರುವವರಿಗೂ, ಹೊರಗಡೆ ಇರುವವರಿಗೂ ಏನೋ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಅಂತಲೇ ಅನಿಸ್ತಿದೆ. ಇವರಿಬ್ಬರೂ “ನಾವಿಬ್ಬರೂ ಫ್ರೆಂಡ್ಸ್” ಅಂತಲೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ವೇಳೆ ಡ್ರೋನ್‌ ಪ್ರತಾಪ್‌ ಸಂಗೀತಾಗೆ ಹುಡುಗನ್ನು ಹುಡುಕಿದ್ದು, ಇನ್ನೊಂದೆಡೆ ಸಂಗೀತಾ ಕಾರ್ತಿಕ್ ನನ್ನ ಫ್ರೆಂಡ್ ಅಷ್ಟೇ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಭಾಗ್ಯಶ್ರೀ ಸಂಗೀತಾಗೆ “ನಿಮಗೆ ಯಾರಾದರೂ ಪ್ರೇಮ ನಿವೇದನೆ ಮಾಡಿಲ್ಲವೇ? ಫ್ರೆಂಡ್‌ಶಿಪ್ ಆದಕೂಡಲೇ ಮದುವೆಗೆ ಒಪ್ಪುತ್ತೀರಾ” ಅಂತ ಮದುವೆ ಬಗ್ಗೆ ಪ್ರಶ್ನೆ ಮಾಡಿಯೇ ಬಿಟ್ಟರು. ಅದಕ್ಕೆ ಸಂಗೀತಾ “ನನಗೆ ಕೆಲವರು ಇಷ್ಟ ಆಗಿದ್ದಾರೆ, ಆದರೆ ಡೀಪ್ ಆಗಿ ಕನೆಕ್ಟ್ ಆಗಿಲ್ಲ. ನನಗೆ ಪ್ರೇಮ ನಿವೇದನೆ ಮಾಡಿದ್ದಾರೆ, ಆದರೆ ಅವರೆಲ್ಲ ಬೇರೆ ಯಾರಿಗೋ ಪ್ರೇಮ ನಿವೇದನೆ ಮಾಡಿರಬಹುದು ಅಂತ ಅನಿಸತ್ತೆ. ಅವರಿಗೆ ಪ್ರೀತಿ ಇದ್ದರೆ ಪರಸ್ಪರ ಗೊತ್ತಾಗತ್ತೆ. ನಾನು ಮದುವೆ ಆಗಲ್ಲ. ನನಗೆ ಮೊದಲು ಫ್ರೆಂಡ್‌ಶಿಪ್‌ ವರ್ಕ್ ಆಗಬೇಕು, ಬಾಂಡಿಂಗ್ ವರ್ಕ್ ಆಗಬೇಕು. ಆಮೇಲೆ ಮದುವೆ ಬಗ್ಗೆ ಯೋಚನೆ ಮಾಡಬೇಕು” ಅಂತ ಹೇಳಿದ್ದಾರೆ.

ಇನ್ನೊಂದು ಕಡೆ ಡ್ರೋನ್‌ ಪ್ರತಾಪ್‌ ಕಾರ್ತಿಕ್‌ಗೆ “ಸಂಗೀತಾ ದೀದಿ ಅವರಿಗೆ ನಾನು ಹುಡುಗನನ್ನು ನೋಡಿದ್ದೀನಿ, ಮದುವೆ ಮಾಡಲಾ” ಅಂತ ಕೇಳಿದಕ್ಕೆ, ಕಾರ್ತಿಕ್ “‌ಸಂಗೀತಾ ಅವರು ನನಗೆ ಬೆಸ್ಟ್ ಫ್ರೆಂಡ್ಸ್, ನನ್ನ ಕಡೆಯಿಂದ ಏನೂ ಇಲ್ಲ. ಫ್ರೆಂಡ್ ಆಗಿ ಅವಳು ನನಗೆ ಇಷ್ಟ” ಎಂದು ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಸಂಗೀತಾ ಬಿಗ್ ಬಾಸ್ ಮನೆಯಲ್ಲಿರುವ ವಸ್ತುವೊಂದರ ಮೇಲೆ ಪಾರ್ಟನರ್ ಬಗ್ಗೆ ಬರೆದಿದ್ದು, ಅದು ಕಾರ್ತಿಕ್ ಕಣ್ಣಿಗೆ ಬಿದ್ದಿದೆ.

ಕಾರ್ತಿಕ್‌ ಸಂಗೀತಾಗೆ ವಸ್ತು ಮೇಲೆ ವೈ ಅಂತ ಬರೆದಿದ್ದೀಯಾ ಅಂತ ಕೇಳಿದಕ್ಕೆ, ಸಂಗೀತಾ ನಾನು ಬರೆದಿಲ್ಲ ಅಂತ ಹೇಳುತ್ತಿದ್ದರು. ಆದರೂ ಕಾರ್ತಿಕ್ ಪ್ರಶ್ನೆ ಮಾಡಿದಾಗ ಸಂಗೀತಾ “ನನ್ನ ಲೈಫ್‌ನಲ್ಲಿ ಏನಾದರೂ ಇದ್ದರೆ ಅವರ ಹತ್ರಾ ಶೇರ್ ಮಾಡಿಕೊಳ್ತೀನಿ. ಅವರು ನನ್ನ ಲೈಫ್ ಪಾರ್ಟನರ್. ಇತ್ತೀಚೆಗೆ ನಾವು ಫ್ರೆಂಡ್ಸ್ ಆಗಿದ್ದೆವು. ಒಬ್ಬ ಹುಡುಗ ಒಬ್ಬ ಹುಡುಗಿ ಹತ್ರ ಮಾತ್ರ ಒಪನ್ ಅಪ್ ಆಗೋಕೆ ಸಾಧ್ಯ. ಹುಡುಗನ ಆ ಆಂಗಲ್‌ನ್ನು ಯಾರೂ ನೋಡಿರಲ್ಲ. ಹುಡುಗನ ಮುಗ್ಧ ಭಾವ ಆ ಹುಡುಗಿ ಬಿಟ್ರೆ ಬೇರೆ ಯಾರ ಜೊತೆಯೂ ಇರಲ್ಲ” ಎಂದು ಹೇಳಿದ್ದಾರೆ. ಆಗ ಕಾರ್ತಿಕ್ ಸಂಗೀತಾಗೆ “ನಾನು ನಿನ್ನ ಬೆಸ್ಟ್ ಫ್ರೆಂಡ್ಸ್” ಅಂತ ಹೇಳಿದ ಬಳಿಕ, ಅಲ್ಲಿಗೆ ಪಾರ್ಟನರ್ ಮಾತುಕತೆ ಮುಕ್ತಾಯವಾಗಿದೆ.

Leave a Reply

You May Have Missed

error: Content is protected !!