ಕಡಬ ಸೈಂಟ್ ಜೋಕಿಮ್ ಶಾಲೆಯ ವಿದ್ಯಾರ್ಥಿ ಲಿಖಿತ್ ರೈ ರಾಜ್ಯ ಮಟ್ಟಕ್ಕೆ ಆಯ್ಕೆ

ಕಡಬ ಸೈಂಟ್ ಜೋಕಿಮ್ ಶಾಲೆಯ ವಿದ್ಯಾರ್ಥಿ ಲಿಖಿತ್ ರೈ ರಾಜ್ಯ ಮಟ್ಟಕ್ಕೆ ಆಯ್ಕೆ

ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮೂಡಬಿದಿರೆ ಇವರ ಸಹಯೋಗದೊಂದಿಗೆ ಸ್ವರಾಜ್ ಮೈದಾನ ಮೂಡಬಿದ್ರೆಯಲ್ಲಿ ನಡದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕಡಬ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಲಿಖಿತ್ ರೈ ಗುಂಡೆಸೆತ ಪ್ರಥಮ ಹಡಲ್ಸ್ ಪ್ರಥಮ ಎತ್ತರ ಜಿಗಿತ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ನವೆಂಬರ್ 2 ಮತ್ತು 3 ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಲಿದ್ದಾರೆ.

ಸಂಸ್ಥೆಯ ಸಂಚಾಲಕರಾದ ವಂದನೀಯ ಫಾದರ್ ಪೌಲ್ ಪ್ರಕಾಶ್ ಡಿ ಸೋಜಾ ಹಾಗೂ ಸೈಂಟ್ ಜೋಕಿಮ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಹಿಲ್ಡಾ ರೋಡ್ರಿಗಸ್ ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಕ ಅರುಣ್ ತರಬೇತಿಯನ್ನು ನೀಡಿರುತ್ತಾರೆ

Leave a Reply

You May Have Missed

error: Content is protected !!