ಅಕ್ಷಯ್ ಕಲ್ಲೇಗ ಮರ್ಡರ್ ಕೇಸ್: ನಾಲ್ವರ ಕೃತ್ಯ-ದೂರು ನೀಡಿದ ವಿಖ್ಯಾತ್ ಬಿ

ಅಕ್ಷಯ್ ಕಲ್ಲೇಗ ಮರ್ಡರ್ ಕೇಸ್: ನಾಲ್ವರ ಕೃತ್ಯ-ದೂರು ನೀಡಿದ ವಿಖ್ಯಾತ್ ಬಿ

ಪುತ್ತೂರು: ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಬರ್ಬರ ಕೊಲೆ ಪ್ರಕರಣದಲ್ಲಿ ನಾಲ್ಕು ಜನ ಭಾಗಿಯಾಗಿರುವುದು ಬಹಿರಂಗವಾಗಿದೆ. ಚಿಕ್ಕಮೂಡ್ನೂರು ಗ್ರಾಮದ ವಿಖ್ಯಾತ್ ಬಿ (27ವ) ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ.6ರಂದು ರಾತ್ರಿ ಪುತ್ತೂರು ನೆಹರೂನಗರದಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷಯ ಕಲ್ಲೇಗರವರಿಗೆ ಹಾಗೂ ಮನೀಶ್ ಮತ್ತು ಚೇತನ್ ಎಂಬವರೊಂದಿಗೆ ದೂರವಾಣಿ ಕರೆಯ ಮೂಲಕ ಮಾತಿನ ಚಕಮಕಿ ನಡೆದಿತ್ತು.

ಈ ಪ್ರಕರಣ ಮುಂದುವರಿದು ಸ್ವಲ್ಪ ಸಮಯದ ಬಳಿಕ ಅಕ್ಷಯ್ ಕಲ್ಲೇಗ ಮತ್ತು ವಿಖ್ಯಾತ್ ನೆಹರೂನಗರದ ಬಳಿಯಿರುವ ಎಟಿಎಂ ಪಕ್ಕದಲ್ಲಿ ನಿಂತುಕೊಂಡ್ಡಿದ್ದ ವೇಳೆ ಕಾರಿನಲ್ಲಿ ಬಂದ ಚೇತನ್, ಮನೀಶ್, ಮಂಜ ಮತ್ತು ಕೇಶವ ಎಂಬುವರು ಅಕ್ಷಯ್‌ ಕಲ್ಲೇಗ ಅವರೊಂದಿಗೆ ದೂರವಾಣಿ ಕರೆಯ ಮೂಲಕ ನಡೆದಿದ್ದ ಮಾತಿನ ಚಕಮಕಿಯ ವಿಚಾರದಲ್ಲಿ ತಕರಾರು ತೆಗೆದು ಅವ್ಯಾಚವಾಗಿ ಬೈದು ತಾವುಗಳು ತಂದಿದ್ದ 2 ತಲವಾರಿನಿಂದ ಹಲ್ಲೆ ನಡೆಸಿದ್ದಾರೆ.

ಈ ವೇಳೆ ವಿಖ್ಯಾತ್ ಓಡಿ ತಪ್ಪಿಸಿಕೊಂಡಿದ್ದು ಅಕ್ಷಯ ಕಲ್ಲೇಗ ಅವರನ್ನು ಚೇತನ್, ಮನೀಶ್, ಮಂಜ ಮತ್ತು ಕೇಶವ ಸೇರಿಕೊಂಡು ತಲವಾರಿನಿಂದ ಕಡಿದು ಕೊಲೆ ಮಾಡಿ ಹೋಗಿದ್ದಾರೆ ಎಂದು ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:106-2023ರಂತೆ ಕಲಂ: 341,504,506,307,302 ಜೊತೆಗೆ 34 IPCಯಂತೆ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!