ಓದು ಎಂದು ತಾಯಿ ಬುದ್ಧಿ ಹೇಳಿದ್ದಕ್ಕೆ ಮನನೊಂದು ಪುತ್ರ ನೇಣಿಗೆ ಶರಣು

ಓದು ಎಂದು ತಾಯಿ ಬುದ್ಧಿ ಹೇಳಿದ್ದಕ್ಕೆ ಮನನೊಂದು ಪುತ್ರ ನೇಣಿಗೆ ಶರಣು

ಓದಿಕೋ ಎಂದು ತಾಯಿ ಬುದ್ಧಿ ಹೇಳಿದಕ್ಕೆ ಮನನೊಂದು ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ದೇಶಪಾಂಡೆ ಫ್ಲ್ಯಾಟ್‌ನಲ್ಲಿ ನಡೆದಿದೆ.

ಸಮರ್ಥ ಸುರೇಶ ಭಜಂತ್ರಿ(14) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕ. ದೀಪಾವಳಿ ರಜೆ ಇದೆ ಅಂತ ತಿರುಗಬೇಡ, ಓದಿಕೋ ಎಂದು ತಾಯಿ ಬುದ್ಧಿ ಹೇಳಿದ್ದರು.

ತಾಯಿಯ ಈ ಮಾತಿಗೆ ಮನನೊಂದು ತಮ್ಮ ಮನೆಯ ಬೆಡ್‌ರೂಂನಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಮರ್ಥ ಮೂಡಲಗಿ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ. ಈ ಸಂಬಂಧ ಬೆಳಗಾವಿ ಜಿಲ್ಲೆಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous post

ಇಂಟರ್ ವ್ಯೂ ಇದೆ ಎಂದು ಹೊಟೇಲ್​ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ, ಉಪನ್ಯಾಸಕ ಅರೆಸ್ಟ್

Next post

ಹಟ್ಟಿಯಲ್ಲಿ ಮಹಿಳಾ ಲ್ಯಾಬ್ ಟೆಕ್ನಿಶಿಯನ್ ಸುಟ್ಟ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಪ್ರಕರಣ: ಇಬ್ಬರ ಬಂಧನ, ಅನೈತಿಕ ಸಂಬಂಧ ಹತ್ಯೆಗೆ ಕಾರಣ

Leave a Reply

You May Have Missed

error: Content is protected !!