ಸ್ಕೂಟರ್‌ಗೆ ಬೆಂಕಿ ಹಚ್ಚಿ ಪ್ರಿಯತಮೆಗೆ ವೀಡಿಯೋ ಕಾಲ್ ಮಾಡಿದ!

ಸ್ಕೂಟರ್‌ಗೆ ಬೆಂಕಿ ಹಚ್ಚಿ ಪ್ರಿಯತಮೆಗೆ ವೀಡಿಯೋ ಕಾಲ್ ಮಾಡಿದ!

ಪಾಗಲ್ ಪ್ರೇಮಿಯೊಬ್ಬ ಹುಚ್ಚಾಟ ಮೆರೆದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ.

ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದ ಮುಖ್ಯ ದ್ವಾರದ ಬಸ್ ನಿಲ್ದಾಣದ ಬಳಿ ನಡೆದಿದೆ. ಪ್ರೇಯಸಿ ಕೈಕೊಟ್ಟಿದ್ದರಿಂದ ಮನನೊಂದು ಆತುರದ ನಿರ್ಧಾರ ತೆಗೆದುಕೊಂಡಿದ್ದಾನೆ.

ನಡೆದಿದ್ದೇನು..?:
ಚೇತನ್ ಎಂಬಾತ 15 ದಿನಗಳ ಹಿಂದೆಯಷ್ಟೇ ಹೊಸ ಸ್ಕೂಟರ್ ಖರೀದಿ ಮಾಡಿದ್ದ. ಆದರೆ ಈ ನಡುವೆ ಚೇತನ್‍ಗೆ ಪ್ರಿಯತಮೆ ಕೈಕೊಟ್ಟಿದ್ದಾಳೆ. ಪ್ರೀತಿಸಿದ ಯುವತಿ ಕೈಕೊಟ್ಟ ವೇದನೆಯಿಂದ ಚೇತನ್ ತನ್ನ ಸ್ಕೂಟರ್ ಗೆ ತಾನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೇ ಯುವತಿಗೆ ವೀಡಿಯೋ ಕಾಲ್ ಮಾಡಿ ಹೊತ್ತಿ ಉರಿಯುತ್ತಿದ್ದ ಬೇಕಿನ ದೃಶ್ಯವನ್ನು ತೋರಿಸಿದ್ದಾನೆ.

ಈ ಎಲ್ಲಾ ಘಟನೆಯನ್ನು ಸ್ಥಳೀಯರು ಕೂಡ ತಮ್ಮ ಮೊಬೈಲ್‍ಗಳಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಯುವಕನ ಹುಚ್ಚಾಟಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಬೈಕಿಗೆ ಬೆಂಕಿ ಹಚ್ಚಿದ ಬಳಿಕ ಯುವಕ ನಾಪತ್ತೆಯಾಗಿದ್ದಾನೆ.

Leave a Reply

You May Have Missed

error: Content is protected !!