ನಟಿ ಆಲಿಯಾ ಭಟ್‌ ಆಶ್ಲೀಲ ಸನ್ನೆಯ ವಿಡಿಯೋ ವೈರಲ್

ನಟಿ ಆಲಿಯಾ ಭಟ್‌ ಆಶ್ಲೀಲ ಸನ್ನೆಯ ವಿಡಿಯೋ ವೈರಲ್

ಸಿನಿರಂಗದಲ್ಲಿ ಕಳೆದ ಕೆಲ ದಿನಗಳ ಹಿಂದೆ ಸಂಚಲನ ಸೃಷ್ಟಿಸಿರುವ ಡೀಪ್‌ ಫೇಕ್‌ ವಿಡಿಯೋ ವಿಚಾರದಲ್ಲಿ ಇದೀಗ ಮತ್ತೊಬ್ಬ ಸ್ಟಾರ್‌ ನಟಿಯ ಹೆಸರು ಕೇಳಿ ಬಂದಿದೆ. ಬಾಲಿವುಡ್‌ ನಟಿಯೊಬ್ಬರ ಡೀಪ್‌ ಫೇಕ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಬಳಸಿ ಸೋಶಿಯಲ್‌ ಮೀಡಿಯಾ ಪ್ರಭಾವಿ ಝಾರಾ ಪಟೇಲ್‌ ಅವರ ಅಸಲಿ ವಿಡಿಯೋಗೆ ಜೋಡಿಸಲಾಗಿತ್ತು. ಇದಾದ ಬಳಿಕ ನಟಿ ಕತ್ರಿನಾ ಕೈಫ್‌ ಅವರ ಮುಖವನ್ನು ಬೇರೊಬ್ಬರ ವಿಡಿಯೋಗೆ ಬಳಸಿ ಆಶ್ಲೀಲವಾಗಿ ಡೀಪ್‌ ಫೇಕ್‌ ಮಾಡಲಾಗಿತ್ತು.

ನಟಿ ಕಾಜೋಲ್‌ ಕೂಡ ಡೀಪ್‌ ಫೇಕ್‌ ಗೆ ಗುರಿಯಾಗಿದ್ದರು. ಇದೀಗ ಬಾಲಿವುಡ್‌ ಸ್ಟಾರ್‌ ನಟಿ ಆಲಿಯಾ ಭಟ್‌ ಅವರ ಮುಖವನ್ನು ಬಳಸಿ ಡೀಪ್‌ ಫೇಕ್‌ ಮಾಡಿರುವ ವಿಡಿಯೋವೊಂದು ವೈರಲ್‌ ಆಗಿದೆ

ಬೆಡ್‌ ಮೇಲೆ ಸಣ್ಣ ಬಟ್ಟೆಯನ್ನು ಧರಿಸಿಕೊಂಡಿರುವ ಹುಡುಗಿಯೊಬ್ಬಳು ಆಶ್ಲೀಲವಾಗಿ ತನ್ನ ದೇಹದ ಪ್ರದರ್ಶನ ಮಾಡುತ್ತಿದ್ದಾಳೆ. ಹಿನ್ನೆಲೆಯಲ್ಲಿ ಹಾಡೊಂದು ಪ್ಲೇ ಆಗಿದೆ. ಆಶ್ಲೀಲ ಸನ್ನೆಯನ್ನು ತೋರಿಸುತ್ತಿರುವ ಯುವತಿಯ ವಿಡಿಯೋಗೆ ನಟಿ ಆಲಿಯಾ ಭಟ್‌ ಅವರ ಫೋಟೋವನ್ನು ಜೋಡಿಸಿ ಡೀಪ್‌ ಫೇಕ್‌ ಮಾಡಲಾಗಿದೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಡೀಪ್ ಫೇಕ್ ತಡೆಗೆ ಶೀಘ್ರ ಹೊಸ ಕಾನೂನು ಜಾರಿ ಮಾಡುವುದೆಂದು ಇತ್ತೀಚೆಗೆ ಕೇಂದ್ರ ಸರ್ಕಾರ ಹೇಳಿದೆ.

Leave a Reply

You May Have Missed

error: Content is protected !!