ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಅಂತರ್-ಪಿಯು ಕಾಲೇಜು ಹಬ್ಬ ಸ್ಪಂದನ-2K23.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಅಂತರ್-ಪಿಯು ಕಾಲೇಜು ಹಬ್ಬ ಸ್ಪಂದನ-2K23.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಆಂತರಿಕ ಗುಣಮಟ್ಟ ಭರವಶ ಕೋಶ ಇವುಗಳ ಆಶ್ರಯದಲ್ಲಿ ನ.27 ರಂದು ಒಂದು ದಿನದ ಅಂತರ್-ಪಿಯು ಕಾಲೇಜು ಹಬ್ಬ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದಿನೇಶ ಪಿ.ಟಿ ವಹಿಸಿದ್ದರು. ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಉದಯ ಕುಮಾರ್.ಕೆ ಅಂತರ್ ಪಿಯು ಕಾಲೇಜು ಹಬ್ಬವನ್ನು ಉದ್ಘಾಟಿಸಿದರು.

ಸುಮಾರು 10 ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಂತರಿಕ ಗುಣಮಟ್ಟ ಭರವಶ ಕೋಶದ ಸಂಯೋಜಕರಾದ ಶ್ರೀಮತಿ. ಲತಾ ಬಿ.ಟಿ, ಸ್ಪಂದನ-2K23 ಯ ಸಂಯೋಜಕರಾದ ಶ್ರೀಮತಿ ಅಶ್ವಿನಿ ಮತ್ತು ವಿದ್ಯಾರ್ಥಿ ಸಂಯೋಜಕರಾದ ಕೌಶಿಕ್.ಕೆ ಮತ್ತು ದೀಕ್ಷಿತ್.ಯಂ ಇವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಯಜ್ಞಾ ಇವರು ಸ್ವಾಗತಿಸಿದರು. ಉಪನ್ಯಾಸಕಿ ಶ್ರೀಮತಿ ಸ್ವಾತಿ.ಕೆ ವಂದಿಸಿದರು. ವಿದ್ಯಾರ್ಥಿನಿ ಧಾತ್ರಿ ನಿರೂಪಿಸಿದರು.

ಪಿಯು ಹಬ್ಬದ ಸಮಾರೋಪ ಸಮಾರಂಭದಲ್ಲಿ ಕಾಂತಾರ ಚಲನಚಿತ್ರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಪೆಸ್ಟ್ ನ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಹಾಗೂ ಬಹುಮಾನ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅಂತರ್ ಪಿಯು ಕಾಲೇಜು ಹಬ್ಬದ ಸಮಗ್ರ ಪ್ರಶಸ್ತಿಯನ್ನು ಎಸ್.ಎಸ್.ಪಿ.ಯು ಕಾಲೇಜು ಸುಬ್ರಹ್ಮಣ್ಯ ಪಡೆದುಕೊಂಡಿತ್ತು. ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಕುಮಾರಸ್ವಾಮಿ ಪಿ ಯು ಕಾಲೇಜು ಪಡೆದುಕೊಂಡಿತ್ತು.

Previous post

ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಗೆ ಪ್ರಶಸ್ತಿ

Next post

ಇತಿಹಾಸ ಪ್ರಸಿದ್ಧ ಶಿಶಿಲ ದೇವರಿಗೆ ಕಾಯಿತಾ (ಅಡಕೆಯ) ಪೂಜೆಯ ಸಂಭ್ರಮ; ಶಿಶಿಲೇಶ್ವರನಿಗೆ ಅಡಕೆ ಗೊನೆ ಅರ್ಪಿಸಿ ಪುನೀತರಾದ ಗ್ರಾಮಸ್ಥರು

Leave a Reply

You May Have Missed

error: Content is protected !!