ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಭಯ ಭೀತರಾದ ವಾಹನ ಸವಾರರು

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ : ಭಯ ಭೀತರಾದ ವಾಹನ ಸವಾರರು

ಚಾರ್ಮಾಡಿ ಘಾಟಿಯ 3ನೆ ತಿರುವುನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು ವಾಹನ ಸವಾರರು ಭಯಭೀತರಾದರು.

ಭಾನುವಾರ ಸಂಜೆ ಚಾರ್ಮಾಡಿ ಘಾಟಿಯ 3ನೆ ತಿರುವುನಲ್ಲಿ ಒಂಟಿ ಸಲಗವೊಂದು ರಸ್ತೆಗೆ ಬಂದಿದ್ದರಿಂದ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಒಂಟಿ ಸಲಗವು ಬೃಹದಾಕಾರವಾಗಿದ್ದು ಒಂದು ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೇ ಇದ್ದು ನಂತರ ತಿರುವಿನಲ್ಲಿ ಅರಣ್ಯಕ್ಕೆ ಸಾಗಿದ್ದು ವಾಹನ ಸವಾರರು ಕಾಡಾನೆಯ ವೀಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.

ಆದರೆ ವಾಹನ ಸವಾರರಿಗೆ ಯಾವುದೇ ತೊಂದರೆ ಉಂಟು ಮಾಡಿಲ್ಲ. ಈ ಕಾಡಾನೆ ಹೆಚ್ಚಾಗಿ ಚಾರ್ಮಾಡಿಯಲ್ಲಿ ಬೀಡು ಬಿಟ್ಟಿದ್ದು ಚಾರ್ಮಾಡಿ ಘಾಟಿಯಲ್ಲಿ ವಾಹನ ಸವಾರರು, ದ್ವಿಚಕ್ರ ಸವಾರರು ಒಂಟಿ ಸಲಗದ ಭೀತಿಯಲ್ಲೇ ಸಾಗಬೇಕಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Previous post

ಬಿಜೆಪಿ ಕಾರ್ಯಕರ್ತರು ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಕ್ಷೇತ್ರಕ್ಕೆ ಪಾದಯಾತ್ರೆ; ಶಾಸಕ ಡಿ.ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ಪೂಜೆ

Next post

ಅನಿಮಲ್​ ಚಿತ್ರಕ್ಕಾಗಿ ಸಂಪೂರ್ಣ ಬೆತ್ತಲಾದ ನಟಿ ತೃಪ್ತಿ: ಸಿನಿಮಾದಲ್ಲಿ ಕತ್ತರಿ ಹಾಕಿದ್ದ ವಿಡಿಯೋ ವೈರಲ್​!

Leave a Reply

You May Have Missed

error: Content is protected !!