ನಕಲಿ ಅಲೋಪತಿ ಡಾಕ್ಟರ್ ಪರ್ಜಿತ್ ನಂಬಿಯಾರ್ ಕ್ಲಿನಿಕ್ ಮೇಲೆ ಹಠಾತ್ ದಾಳಿ

ನಕಲಿ ಅಲೋಪತಿ ಡಾಕ್ಟರ್ ಪರ್ಜಿತ್ ನಂಬಿಯಾರ್ ಕ್ಲಿನಿಕ್ ಮೇಲೆ ಹಠಾತ್ ದಾಳಿ

ನಕಲಿ ಅಲೋಪತಿ ಡಾಕ್ಟರ್ ಪರ್ಜಿತ್ ನಂಬಿಯಾರ್ ಕ್ಲಿನಿಕ್ ಮೇಲೆ ಹಠಾತ್ ದಾಳಿ ನಡೆಸಿದ ಕುಂದಾಪುರ ತಾಲೂಕು ಆರೋಗ್ಯಧಿಕಾರಿ ಡಾಕ್ಟರ್ ಪ್ರೇಮಾನಂದ್ ಮತ್ತು ತಂಡ. ಇವರು ಆಯುರ್ವೇದಿಕ್ ಡಾಕ್ಟರ್ ಆಗಿದ್ದು ಇವರು ಮೊದಲಿನಿಂದಲೂ ಅಲೋಪತಿ ಪ್ರಾಕ್ಟೀಸ್ ಮಾಡುತ್ತಿದ್ದರು ಎನ್ನುವ ಸಾರ್ವಜನಿಕರ ದೂರಿನ ಮೇಲೆ ದಾಳಿಯ ನಡೆಸಿದಾಗ ಇವರ ಕ್ರಾಸ್ ಪ್ರಾಕ್ಟೀಸ್ ಸಾಬೀತಾಗಿದೆ ಇವರ ಮೇಲೆ FIR ದಾಖಲಿಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಮುಂದಿನ ದಿನಗಳಲ್ಲಿ ನಕಲಿ ಅಲೋಪತಿ ಡಾಕ್ಟರ್ ಗಳ ಹಾವಳಿಯನ್ನು ತಪ್ಪಿಸುವ ಸೂಚನೆ ದೊರೆತಿದೆ. ಸಾರ್ವಜನಿಕ ವಲಯದಲ್ಲಿ ಡಾಕ್ಟರ್ ಪ್ರೇಮಾನಂದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

Leave a Reply

You May Have Missed

error: Content is protected !!