ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!

ಭಜರಂಗದಳದ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ!

ಕರಾವಳಿಯಲ್ಲಿ ರಿವರ್ಸ್ ಲವ್ ಜಿಹಾದ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲವ್ ಜಿಹಾದ್ ವಿರುದ್ಧ ಧ್ವನಿಯೆತ್ತುವ ಭಜರಂಗದಳದಲ್ಲಿಯೇ ಅಂತರ್‌ಧರ್ಮೀಯ ವಿವಾಹವೊಂದು ನಡೆದಿದೆ.

ಇದು ಮಂಗಳೂರಿನ ಸುರತ್ಕಲ್‍ನಲ್ಲಿ ನಡೆದ ಹಿಂದೂ-ಮುಸ್ಲಿಂ ಲವ್ ಸ್ಟೋರಿಯಾಗಿದೆ ಮುಸ್ಲಿಂ ಯುವತಿಯೊಬ್ಬಳು ಭಜರಂಗದಳದ ಕಾರ್ಯಕರ್ತನನ್ನೇ ಮದುವೆಯಾಗಿದ್ದಾಳೆ.

ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿರೋ ಪ್ರಶಾಂತ್ ಭಂಡಾರಿ ಹಾಗೂ ಆಯೇಷಾ ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಂತೆಯೇ ನ.30ರಂದು ಸುರತ್ಕಲ್‍ನ ಆಯೇಷಾ ಜೊತೆ ಪ್ರಶಾಂತ್ ಪರಾರಿಯಾಗಿದ್ದ.

ಸುರತ್ಕಲ್ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿರೋ ಪ್ರಶಾಂತ್, ದೀಪಕ್ ರಾವ್ ಹತ್ಯೆ ಆರೋಪಿ ಪಿಂಕಿ ನವಾಜ್ ಎಂಬಾತನ ಹತ್ಯೆಗೂ ಯತ್ನಿಸಿದ್ದ. ಇದೀಗ ಸುರತ್ಕಲ್ ನ ಮುಸ್ಲಿಂ ಯುವತಿಯ ಪ್ರೀತಿಸಿ ವರಿಸಿ ಸುದ್ದಿಯಾಗಿದ್ದಾನೆ.

ಇತ್ತ ಆಯೇಷಾ ಪೋಷಕರು ಸುರತ್ಕಲ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆಯೇಷಾ ಒಪ್ಪಿಗೆ ಮೇರೆಗೆ ಪ್ರಶಾಂತ್ ಜೊತೆ ತೆರಳಿರೋದಾಗಿ ದೂರಿನಲ್ಲಿ ಪೋಷಕರು ಉಲ್ಲೇಖ ಮಾಡಿದ್ದಾರೆ.

Leave a Reply

You May Have Missed

error: Content is protected !!