ಜೇಸಿಐ ಸುಳ್ಯ ಸಿಟಿ ವತಿಯಿಂದ ಕ್ಯಾನ್ಸರ್ ಮತ್ತು ಕ್ಷಯರೋಗ ಜಾಗೃತಿ

ಜೇಸಿಐ ಸುಳ್ಯ ಸಿಟಿ ವತಿಯಿಂದ ಕ್ಯಾನ್ಸರ್ ಮತ್ತು ಕ್ಷಯರೋಗ ಜಾಗೃತಿ

ನೇಸರ ಫೆ.06: ಜೇಸಿಐ ಸುಳ್ಯ ಸಿಟಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ, ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ದಕ್ಷಿಣ ಕನ್ನಡ, ಕ್ಷಯ ಚಿಕಿತ್ಸಾ ಘಟಕ ಸುಳ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆಯ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯದಲ್ಲಿ ಟಿ‌ಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗ ವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.
ಜೇಸಿಐ ಸುಳ್ಯ ಸಿಟಿಯ ಅಧ್ಯಕ್ಷ ಬಶೀರ್.ಯು.ಪಿ ಸಬೆಯ ಅಧ್ಯಕ್ಷತೆ ವಹಿಸಿದ್ದರು.ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಗಿರೀಶ್ ರವರು ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ|ಅಚ್ಚುತ ಪೂಜಾರಿ.ಕೆ, ಸಹಾಯಕ ಪ್ರಾಧ್ಯಾಪಕದ ಉದಯಶಂಕರ್,ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೇಕೇಶ್ ತಂಟೆಪಾಡಿ, ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ ಕನಕಮಜಲು, ಕೋಶಾಧಿಕಾರಿ ಭಾಗೇಶ್. ಕೆ.ಟಿ, ಸದಸ್ಯ ವೆಂಕಟೇಶ್ .ಆರ್ ಮೇನಾಲ, ಜೇಜೇಸಿ ಅಧ್ಯಕ್ಷ ಯಕ್ಷಿತ್ ಮತ್ತು ಜೇಜೇಸಿ ಕಾರ್ಯದರ್ಶಿ ಭಗಥ್ ಉಪಸ್ಥಿತರಿದ್ದರು ಸುಮಾರು 80 ವಿದ್ಯಾರ್ಥಿಗಳು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದರು ಬಶೀರ್.ಯ.ಪಿ ಸ್ವಾಗತಿಸಿ, ಚಂದ್ರಶೇಖರ್ ಕನಕಮಜಲು ವಂದಿಸಿದರು.

🔔ಆಮಂತ್ರಣ🔔

🔔ಜಾಹೀರಾತು🔔

Leave a Reply

You May Have Missed

error: Content is protected !!