ಹೋಮ್​ಸ್ಟೇನಲ್ಲಿ ಕೇರಳ ಮೂಲದ ದಂಪತಿ, ಮಗು ಆತ್ಮಹತ್ಯೆ

ಹೋಮ್​ಸ್ಟೇನಲ್ಲಿ ಕೇರಳ ಮೂಲದ ದಂಪತಿ, ಮಗು ಆತ್ಮಹತ್ಯೆ

ಕೇರಳ ಮೂಲದ ದಂಪತಿ ಹಾಗೂ ಮಗು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದ ಅರೇಕಾ ಹೋಮ್​ಸ್ಟೇನಲ್ಲಿ ನಡೆದಿದೆ. ಕೊಲ್ಲಂ ಮೂಲದ ಇವರು ನಿನ್ನೆ ಸಂಜೆ 6.30 ಕ್ಕೆ ಪ್ರವಾಸಕ್ಕೆಂದು ರೆಸಾರ್ಟ್ ಗೆ ಆಗಮಿಸಿದ್ದರು.

ಆದರೆ, ಇಂದು ಬೆಳಗ್ಗೆ ಎಷ್ಟು ಹೊತ್ಯಾದರೂ ಬಾಗಿಲು ತೆಗೆಯದ ಹಿನ್ನಲೆ ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೊಲ್ಲಂ‌ನಲ್ಲಿರುವ ಕುಟುಂಬಸ್ಥರಿಗೆ ಈಗಾಗಲೇ ಪೊಲೀಸರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬಸ್ಥರು ಬಂದ ಬಳಿಕವೇ ರೂಂ ಬಾಗಿಲು ಓಪನ್ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

Leave a Reply

You May Have Missed

error: Content is protected !!