ಬೈಕ್ ಗೆ ಬಸ್ ಢಿಕ್ಕಿ; ಸವಾರ ಮೃತ್ಯು

ಬೈಕ್ ಗೆ ಬಸ್ ಢಿಕ್ಕಿ; ಸವಾರ ಮೃತ್ಯು

ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ರವಿವಾರ ಬೆಳಿಗ್ಗೆ ಅರ್ಕುಳ ದ್ವಾರದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಕುಕ್ಕಾಜೆ ನಿವಾಸಿ ಹಂಝ ಯಾನೆ ರಮ್ಲಾನ್ ಎಂದು ಗುರುತಿಸಲಾಗಿದೆ.

ಮಂಗಳೂರು ಕಡೆಗೆ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಬಸ್ ಬೈಕ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ರಮ್ಲಾನ್ ಮೃತಪಟ್ಟರು ಎಂದು ತಿಳಿದು ಬಂದಿದೆ. ಬೈಕ್ ನ ಹಿಂಬದಿಯಲ್ಲಿದ್ದ ರಮ್ಲಾನ್ ಅವರ ಪತ್ನಿ ಬಜಾಲ್ ಮೂಲದ ರೈಹಾನ ಮತ್ತು ಮಗು ಅದೃಷ್ವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

You May Have Missed

error: Content is protected !!