ಚಾಲಕನ ನಿಯಂತ್ರಣ ತಪ್ಪಿದ ಕಾರು ತಡೆಗೋಡೆಗೆ ಢಿಕ್ಕಿ

ಚಾಲಕನ ನಿಯಂತ್ರಣ ತಪ್ಪಿದ ಕಾರು ತಡೆಗೋಡೆಗೆ ಢಿಕ್ಕಿ

ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ತಡೆಗೋಡೆಗೆ ಢಿಕ್ಕಿಯಾದ ಘಟನೆ ಮಾಣಿ ಸಮೀಪದ ‌ಸೂರಿಕುಮೇರು ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಕಾರು ಹೆದ್ದಾರಿ ಬದಿ ಗುಡ್ಡ ಜರಿದು ಬೀಳದಂತೆ ಕಟ್ಟಲಾದ ತಡೆಗೋಡೆಗೆ ಗುದ್ದಿ ಬಳಿಕ ಚರಂಡಿ ಮೇಲೆ ಹತ್ತಿ ನಿಂತುಕೊಂಡಿದೆ. ಘಟನೆಯಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು ಪ್ರಯಾಣಿಕರು ಅಲ್ಪ ಸ್ವಲ್ಪ ಗಾಯಗಳಿಂದ ಪಾರಾಗಿದ್ದಾರೆ.

ಚಾಲಕ ಸಹಿತ ಮೂವರು ಮಹಿಳೆಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ವ್ಯಕ್ತಿಗಳ ಮಾಹಿತಿ ತಿಳಿದುಬಂದಿಲ್ಲ.

Leave a Reply

You May Have Missed

error: Content is protected !!