28 ರ ಹರೆಯದ ಹೋಟೆಲ್ ಮ್ಯಾನೇಜರ್‌ ಹೃದಯಾಘಾತದಿಂದ ನಿಧನ

28 ರ ಹರೆಯದ ಹೋಟೆಲ್ ಮ್ಯಾನೇಜರ್‌ ಹೃದಯಾಘಾತದಿಂದ ನಿಧನ

ಮಂಗಳೂರಿನ ಹೆಸರಾಂತ ಹೋಟೆಲ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮ್ಯಾನೇಜರ್‌ ಸೋಮವಾರ ರಾತ್ರಿ ನಿಧನ ಹೊಂದಿದ್ದಾರೆ.

ಆತ್ರಾಡಿ ಪರೀಕ ನಿವಾಸಿ ಮಹೇಶ ಶೆಟ್ಟಿ(28) ಜ.8ರಂದು ನಿಧನ ಹೊಂದಿದ್ದು, ಮೃತರು ತಂದೆ, ತಾಯಿ, ಸಹೋದರ, ಸಹೋದರಿಯನ್ನುಅಗಲಿದ್ದಾರೆ.

ಇತ್ತೀಚೆಗಷ್ಟೇ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್‌ ಮುಗಿಸಿದ್ದ ಅವರು ಬಳಿಕ ಉಡುಪಿ, ಮಂಗಳೂರಿನಲ್ಲಿ ಹೋಟೆಲ್ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ಈ ಹಿಂದೆ ಆತ್ರಾಡಿಯಲ್ಲಿ ಡ್ಯಾನ್ಸ್‌ ಕ್ರಿವ್‌ ನೃತ್ಯ ತರಬೇತಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರು. ಮತ್ತೆ ಸಂಸ್ಥೆಯನ್ನು ಮುಂದುವರಿಸಬೇಕೆಂಬ ಇಚ್ಚೆಯನ್ನೂ ಹೊಂದಿದ್ದರು ಎನ್ನಲಾಗಿದೆ.

Leave a Reply

You May Have Missed

error: Content is protected !!