ಜುವೆಲರಿ ಅಂಗಡಿಯಿಂದ ಕಳವು: ಮೂವರ ಸೆರೆ

ಜುವೆಲರಿ ಅಂಗಡಿಯಿಂದ ಕಳವು: ಮೂವರ ಸೆರೆ

ಮಂಗಳೂರು ನಗರದ ಜುವೆಲರಿ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದು ಗಮನ ಬೇರೆಡೆ ಸೆಳೆದು ಸುಮಾರು 6 ಲ.ರೂ. ಮೌಲ್ಯದ 97.11 ಗ್ರಾಂ ಚಿನ್ನ ಎಗರಿಸಿದ ಮೂವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಮಂಜನಾಡಿಯ ಮಹಮ್ಮದ್‌ ಸಿನಾನ್‌ (25) ಮತ್ತು ಹೈದರ್‌ಆಲಿ ಆಸಿಲ್‌(20) ಹಾಗೂ ನಾಟೇಕಲ್‌ನ ಮೊಹಮ್ಮದ್‌ ತನ್ವೀರ್‌(34) ಬಂಧಿತರು.

ಆರೋಪಿಗಳು ಜ. 3ರಂದು ಚಿನ್ನ ಲಪಟಾಯಿಸಿದ ಬಗ್ಗೆ ಮಂಗಳೂರು ಉತ್ತರ ಠಾಣೆಗೆ ದೂರು ನೀಡಲಾಗಿತ್ತು.

ಆರೋಪಿಗಳಿಂದ 6 ಲ.ರೂ. ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಸ್ಕೂಟರ್‌, 2 ಮೊಬೈಲ್‌ ಫೋನ್‌ಗಳು ಸಹಿತ ಒಟ್ಟು 7.15 ಲ.ರೂ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆರೋಪಿಗಳ ಪೈಕಿ ಮೊಹಮ್ಮದ್‌ ತನ್ವೀರ್‌ನ ವಿರುದ್ದ ಈ ಹಿಂದೆ ಕೋಣಾಜೆ ಪೊಲೀಸ್‌ ಠಾಣೆಯಲ್ಲಿ ದರೋಡೆ ಪ್ರಕರಣ ಹಾಗೂ ಹೈದರ್‌ಆಲಿ ಆಸಿಲ್‌ ನ ವಿರುದ್ಧ ಕೋಣಾಜೆ ಪೊಲೀಸ್‌ ಠಾಣೆಯಲ್ಲಿ 2 ಹಲ್ಲೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ತಿಳಿಸಿದ್ದಾರೆ.

Leave a Reply

You May Have Missed

error: Content is protected !!