ಉಜಿರೆ ಎಸ್.ಡಿ.ಎಂ ಪ.ಪೂ ಕಾಲೇಜು: ರಾಷ್ಟ್ರೀಯ ಯುವ ದಿನಾಚರಣೆ

ಉಜಿರೆ ಎಸ್.ಡಿ.ಎಂ ಪ.ಪೂ ಕಾಲೇಜು: ರಾಷ್ಟ್ರೀಯ ಯುವ ದಿನಾಚರಣೆ

ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಠಾರದಲ್ಲಿ ಇರುವ ಉಜಿರೆಯ ಸದ್ಭಾವನೆಯ ಗೋಡೆಯಾದ ಎಸ್.ಡಿ.ಎಂ ವಾಲ್ ಆಫ್ ಗುಡ್ ವಿಲ್ ಇದಕ್ಕೆ ನಿತ್ಯೋಪಯೋಗಿ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಲಾಯಿತು.
ವಿದ್ಯಾರ್ಥಿ ಸ್ವಯಂ ಸೇವಕ ಬೋರೇಶ್ ಅವರು ಯುವದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಘಟಕದ ನಾಯಕರಾದ ಸುದರ್ಶನ ನಾಯಕ್ ಹಾಗೂ ದಕ್ಷಾ ಅವರ ನೇತೃತ್ವದಲ್ಲಿ ಉಜಿರೆ ಪರಿಸರದ ಸ್ವಚ್ಛತೆ ಕಾರ್ಯವನ್ನು ಮಾಡಲಾಯಿತು.

ರಾ.ಸೇ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಉಪಸ್ಥಿತರಿದ್ದರು. ಸ್ವಯಂ ಸೇವಕ ಆದಿತ್ಯ ನಿರೂಪಿಸಿ ವಂದಿಸಿದರು.

Leave a Reply

You May Have Missed

error: Content is protected !!