ರಸ್ತೆ ಬದಿ ನಿಂತಿದ್ದ ಮಹಿಳೆಗೆ ವ್ಯಾಗನರ್ ಡಿಕ್ಕಿ; ಗಂಭೀರ ಗಾಯ

ರಸ್ತೆ ಬದಿ ನಿಂತಿದ್ದ ಮಹಿಳೆಗೆ ವ್ಯಾಗನರ್ ಡಿಕ್ಕಿ; ಗಂಭೀರ ಗಾಯ

ಗುರುವಾಯನಕೆರೆ: ಇಲ್ಲಿಯ ಅರೆಮಲೆಬೆಟ್ಟ ದ್ವಾರದ ಬಳಿ ರಸ್ತೆ ಬದಿ ನಿಂತಿದ್ದ ಮಹಿಳೆಗೆ ವ್ಯಾಗನರ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಘಟನೆ ಜ.13 ರಂದು ಬೆಳಗ್ಗೆ ನಡೆದಿದೆ.

ಅರೆಮಲೆಬೆಟ್ಟು ದ್ವಾರದ ಎದುರಿನ ನಿವಾಸಿ, ತಾ.ಪಂ ಮಾಜಿ ಸದಸ್ಯ ಗೋಪಿನಾಥ ನಾಯಕ್ ಅವರ ಪತ್ನಿ ಶ್ರೀಮತಿ ಅಂಜಲಿ ನಾಯಕ್ ಅವರು ಗಂಭೀರ ಏಟು ತಗಲಿದ್ದು, ಅವರನ್ನು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಪಿನಾಥ ನಾಯಕ್ ಅವರು ಗುರುವಾಯನಕೆರೆಯಲ್ಲಿ ಅಂಗಡಿಯನ್ನು ಹೊಂದಿದ್ದು, ಅವರ ಪತ್ನಿ ಬೆಳಿಗ್ಗೆ ಅಂಗಡಿಗೆ ಹೋಗಲು ರಸ್ತೆ ಬದಿ ನಿಂತಿದ್ದಾಗ ಶಕ್ತಿನಗರ ಕಡೆಯಿಂದ ಗುರುವಾಯನಕೆರೆ ಕಡೆಗೆ ವೇಗವಾಗಿ ಬಂದ ವ್ಯಾಗನರ್ ಅವರಿಗೆ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ಓಮಿನಿ ವ್ಯಾನ್ ಗೆ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿಯಿಂದ ಕುಸಿದು ಬಿದ್ದ‌ ಅವರನ್ನು ಕೂಡಲೇ ಚಿಕಿತ್ಸೆಗಾಗಿ ಗುರುವಾಯನಕೆರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

Leave a Reply

You May Have Missed

error: Content is protected !!