ಇಚ್ಲಂಪಾಡಿ: ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಇಚ್ಲಂಪಾಡಿ: ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್

ನೆಲ್ಯಾಡಿ: ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಬರುಮಾರು ಕೈಪನಡ್ಕಯ ಕೆ.ಪಿ ಜಾರ್ಜ್ ಎಂಬವರು ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಏನಿದು ಪ್ರಕರಣ?
ಕೆ.ಪಿ ಚಾರ್ಜ್ ಎಂಬವರು ಉಪಯೋಗಿಸುತ್ತಿದ್ದ ಮೊಬೈಲ್ 8722309913 ನಂಬರ್ ಗೆ ಜ.12 ರಂದು ರಾತ್ರಿ 11:55 ಕ್ಕೆ ಮೊಬೈಲ್ ನೋಡುತ್ತಿರುವ ಸಂದರ್ಭ ಕ್ರಿಶ್ಚಿಯನ್ ಬ್ರದರ್ಸ್ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಸುನೀಶ್ ಟಿ.ಪಿ., ಎಂಬುವರು ಹಾಕಿದ ಸ್ಕ್ರೀನ್ ಶಾಟ್ ಅನ್ನು ನೋಡಲಾಗಿ ಇಚ್ಲಂಪಾಡಿ ಗ್ರಾಮದ ಗ್ರಾಮದ ಒಡ್ಯತಡ್ಕ ಮನೆ ಪುರುಷೋತ್ತಮ ಓ ದವಳಗಿರಿ ಎಂಬವರ ಪ್ರೊಫೈಲ್ ಹೆಸರಿನ ಸ್ಕ್ರೀನ್ ಶಾಟ್ ನಲ್ಲಿ “ಕಡಬ ತಾಲ್ಲೂಕು ಇಚಿಲಂಪಂಡಿಯ ಕೆಲವು ಮಲಯಾಳಿ ಹಿಂದೂಗಳಿಗೆ ಅದೇ ಏನೋ ತಲೆಕಟ್ಟಿದೆಯೋ ಸರಿಯಾಗಿ ದುಡಿಯದೇ.. ಹಣಕ್ಕಾಗಿ ಪಾದ್ರಿಯಾ ತೀಕ ಮೂಸುತ್ತಿದ್ದಾರೆ” ಎಂಬುದಾಗಿ ಕ್ರಿಶ್ಚಿಯನ್ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಖಾತೆಯಲ್ಲಿ ಹರಿಬಿಟ್ಟು, ಧರ್ಮ ಧರ್ಮಗಳ ನಡುವೆ ಸಾಮರಸ್ಯ ಕೆಡಿಸಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದಾಗಿದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Leave a Reply

You May Have Missed

error: Content is protected !!