ಪ್ರಿಯತಮೆಗಾಗಿ ಹೆಣ್ಣಿನ ವೇಷದಲ್ಲಿ ಪರೀಕ್ಷೆ ಬರೆಯಲು ಬಂದಿದ್ದವನ ಸೆರೆ!

ಪ್ರಿಯತಮೆಗಾಗಿ ಹೆಣ್ಣಿನ ವೇಷದಲ್ಲಿ ಪರೀಕ್ಷೆ ಬರೆಯಲು ಬಂದಿದ್ದವನ ಸೆರೆ!

ತನ್ನ ಪ್ರಿಯತಮೆಯಂತೆ ಸೋಗು ಹಾಕಿಕೊಂಡು ಆರೋಗ್ಯ ಕಾರ್ಯಕರ್ತರ ಪರೀಕ್ಷೆ ಬರೆಯಲು ಹೆಣ್ಣಿನ ವೇಷದಲ್ಲಿ ಆಗಮಿಸಿದ್ದ ಪ್ರಿಯಕರನೊಬ್ಬಪರೀಕ್ಷಾ ಕೇಂದ್ರದ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಪಂಜಾಬ್‌ನ ಫ‌ರೀದ್‌ಕೋಟ್‌ನಲ್ಲಿ ನಡೆದಿದೆ. ಬಾಬಾ ಫ‌ರೀದ್‌ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಆರೋಗ್ಯ ಕಾರ್ಯಕರ್ತರ ನೇಮಕಕ್ಕಾಗಿ ಜ.7ರಂದು ಪರೀಕ್ಷೆ ಆಯೋಜಿಸಿತ್ತು.

ಪರಮ್‌ಜಿತ್‌ ಕೌರ್‌ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಳು. ಕೊಟಕ್‌ಪುರದ ಡಿಎವಿ ಪಬ್ಲಿಕ್‌ ಶಾಲೆಯಲ್ಲಿ ಪರೀಕ್ಷಾ ಕೇಂದ್ರವಿತ್ತು. ತನ್ನ ಪ್ರಿಯತಮೆ ನೇಮಕವಾಗುವಂತೆ ಸಹಾಯ ಮಾಡಲು, ಅಂಗ್ರೇಜ್‌ ಸಿಂಗ್‌ ಸ್ವತಃ ಆಕೆಯಂತೆ ಉಡುಪು ಧರಿಸಿ, ಬಳೆ ತೊಟ್ಟು, ಬೊಟ್ಟು ಇಟ್ಟುಕೊಂಡು ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ. ಅಲ್ಲದೇ ಇದಕ್ಕಾಗಿ ನಕಲಿ ಮತದಾರರ ಚೀಟಿ ಮತ್ತು ಆಧಾರ್‌ ಕಾರ್ಡ್‌ ಕೂಡ ಸಿದ್ಧಪಡಿಸಿಕೊಂಡಿದ್ದ.

ಆದರೆ ಬಯೋಮೆಟ್ರಿಕ್‌ ಪರಿಶೀಲನೆಯಲ್ಲಿ ಈತನ ಅಸಲಿ ಬಣ್ಣ ಬಯಲಾಗಿದೆ. ಪರೀಕ್ಷಾ ಕೇಂದ್ರದ ಅಧಿಕಾರಿಗಳು ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಪರೀಕ್ಷಾ ನಕಲು ಸಂಬಂಧ ಅಂಗ್ರೇಜ್‌ ಸಿಂಗ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

You May Have Missed

error: Content is protected !!