ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

ನೇತ್ರಾವತಿ ನದಿಯಲ್ಲಿ ಮುಳುಗಿ ಬಾಲಕ ಮೃತ್ಯು

ಬಾಲಕನೋರ್ವ ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ವೇಳೆ ನಾವೂರ ಎಂಬಲ್ಲಿ ನಡೆದಿದೆ.

ಅಲ್ಲಿಪಾದೆ ನಾವೂರ ಗ್ರಾಮದ ಕೋಡಿಬೈಲು ನಿವಾಸಿ ಪ್ರಜ್ವಲ್ ನಾಯಕ್ (13) ಮೃತಪಟ್ಟ ಬಾಲಕ.ನಾವೂರ ಗ್ರಾಮದ ನೆಕ್ಕಿಲಾರು ಎಂಬಲ್ಲಿ ಸ್ನೇಹಿತರ ಜೊತೆ ನದಿಯ ಬದಿಗೆ ತೆರಳಿದ ವೇಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳೀಯ ಮುಳುಗು ತಜ್ಞರು ಬಾಲಕನನ್ನು ಮೇಲಕ್ಕೆ ಎತ್ತಿದ್ದು, ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

You May Have Missed

error: Content is protected !!