ಕೊಕ್ಕಡ ಸಮೀಪ ಬೈಕ್‌ಗಳೆರಡು ಢಿಕ್ಕಿ, ಗಾಯ

ಕೊಕ್ಕಡ ಸಮೀಪ ಬೈಕ್‌ಗಳೆರಡು ಢಿಕ್ಕಿ, ಗಾಯ

ಕೊಕ್ಕಡ ಗ್ರಾಮದ ಕಲಂದೂರು ಸಮೀಪ ಬೈಕ್‌ಗಳೆರಡು ಢಿಕ್ಕಿಯಾದ ಪರಿಣಾಮ ಸವಾರರು ಗಾಯಗೊಂಡ ಘಟನೆ ನಡೆದಿದೆ.
ಹತ್ಯಡ್ಕ ನಿವಾಸಿ ಉಪೇಂದ್ರ ಹಾಗೂ ಜಾರ್ಜ್‌ ಗಾಯಗೊಂಡವರು. ಉಪೇಂದ್ರ ಅವರು ಬೆಳ್ತಂಗಡಿಯಿಂದ ಕೊಕ್ಕಡ ಕಡೆ ಸಾಗುವಾಗ ಜಾರ್ಜ್‌ ಎಂಬವರು ನಿರ್ಲಕ್ಷ್ಯತನದಿಂದ ವಿರುದ್ಧ ದಿಕ್ಕಿನಿಂದ ಬಂದು ಅಪಘಾತ ಎಸಗಿದ್ದಾರೆ.
ಪರಿಣಾಮ ಬೈಕ್‌ಗಳು ಢಿಕ್ಕಿಯಾಗಿ ಸವಾರ ಉಪೇಂದ್ರ ಅವರಿಗೆ ಹಾಗೂ ಮತ್ತೊಂದು ಬೈಕ್‌ ಸವಾರ ಜಾರ್ಜ್‌ ಅವರಿಗೆ ಗಾಯವಾಗಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಬೆಳ್ತಂಗಡಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

You May Have Missed

error: Content is protected !!