ಉದನೆ: ಡಾಮರು ಸಾಗಾಟದ ಲಾರಿ ಭಾಗಶಃ ಬೆಂಕಿಗಾಹುತಿ

ಉದನೆ: ಡಾಮರು ಸಾಗಾಟದ ಲಾರಿ ಭಾಗಶಃ ಬೆಂಕಿಗಾಹುತಿ

ನೆಲ್ಯಾಡಿ: ಚಲಿಸುತ್ತಿದ್ದ ಡಾಮರು ಸಾಗಾಟದ ಲಾರಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಾರಿ ಭಾಗಶಃ ಸುಟ್ಟು ಹೋದ ಘಟನೆ ಫೆ.13ರಂದು ರಾತ್ರಿ 11.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿ 75ರ ಉದನೆ ಸಮೀಪ ನಡೆದಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಡಾಮರು ಸಾಗಾಟದ ಲಾರಿ ಉದನೆ ತಲುಪುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ಅಪಾಯದ ಅರಿವು ಸಿಗುತ್ತಿದಂತೆ ಚಾಲಕ ಲಾರಿ ನಿಲ್ಲಿಸಿ ಕೆಳಗಿಳಿಯುತ್ತಿದಂತೆ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ.

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ಕಾರ್ಮಿಕರು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಲಾರಿ ಭಾಗಶಃ ಸುಟ್ಟು ಹೋಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.

Leave a Reply

You May Have Missed

error: Content is protected !!