ಪುಳಿತ್ತಡಿ ಪದ್ಮನಾಭ ಆಚಾರ್ಯರಿಗೆ ಶ್ರದ್ಧಾಂಜಲಿ

ಪುಳಿತ್ತಡಿ ಪದ್ಮನಾಭ ಆಚಾರ್ಯರಿಗೆ ಶ್ರದ್ಧಾಂಜಲಿ

ಉಪ್ಪಿನಂಗಡಿ ಶ್ರೀಕಾಳಿಕಾಂಬಾ ಯಕ್ಷಗಾನ ಕಲಾ ಸಂಘ ಇದರ ಅಜೀವ ಸದಸ್ಯರಾಗಿದ್ದು ನಿಧನರಾದ ಯಕ್ಷಗಾನ ಪೋಷಕ ಪದ್ಮನಾಭ ಆಚಾರ್ಯ ಪುಳಿತ್ತಡಿ ಇವರಿಗೆ ಯಕ್ಷಗಾನ ಸಂಘದ ವತಿಯಿಂದ ನುಡಿನಮನ ಸಲ್ಲಿಸಲಾಯಿತು.

ದಿವಂಗತರ ಬಗ್ಗೆ ನಿವೃತ್ತ ಶಿಕ್ಷಕ,ಕಲಾವಿದ ಶ್ರೀ ಗೋಪಾಲ ಶೆಟ್ಟಿ ಕಳೆಂಜ ಹಾಗೂ ಸಂಘದ ಅಧ್ಯಕ್ಷ ಶ್ರೀ ದಿವಾಕರ ಆಚಾರ್ಯ ಗೇರುಕಟ್ಟೆ ಮಾತಾಡಿದರು.

ಕಾರ್ಯದರ್ಶಿ ಶ್ರೀಪತಿಭಟ್,ಪ್ರಸಂಗಕರ್ತ ಚಾರ ಪ್ರದೀಪ ಹೆಬ್ಬಾರ್,ಭಾಗವತ ಪದ್ಮನಾಭ ಕುಲಾಲ್,ಹರೀಶ್ ಆಚಾರ್ಯ ಬಾರ್ಯ, ಸಂಜೀವ ಪಾರೆಂಕಿ, ಸುರೇಶ್ ರಾವ್.ಬಿ, ಪ್ರಚೇತ್ ಆಳ್ವ, ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ ಉಪಸ್ಥಿತರಿದ್ದು.

ಮೌನ ಪ್ರಾರ್ಥನೆಯೊಂದಿಗೆ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲಾಯಿತು. ಬಳಿಕ ಶಿವಾನುಗ್ರಹ ತಾಳಮದ್ದಳೆ ಜರಗಿತು.

Leave a Reply

You May Have Missed

error: Content is protected !!