ಗೋಳಿತಟ್ಟು : ಜನಜಾಗೃತಿ ವೇದಿಕೆ ವತಿಯಿಂದ ವೈದ್ಯಕೀಯ ನೆರವು ಹಸ್ತಾಂತರ

ಗೋಳಿತಟ್ಟು : ಜನಜಾಗೃತಿ ವೇದಿಕೆ ವತಿಯಿಂದ ವೈದ್ಯಕೀಯ ನೆರವು ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಕಡಬ ಇವರಿಂದ ಗೋಳಿತಟ್ಟು ವಲಯ ಜನಜಾಗೃತಿ ವಲಯ ಅಧ್ಯಕ್ಷರಾದ ನೋಣಯ್ಯ ಪೂಜಾರಿ ಅಂಭರ್ಜೆ ರಸ್ತೆ ಅಪಘಾತದಲ್ಲಿ ಕಾಲು ಮುರಿತಕ್ಕೆ ಒಳಗಾಗಿದ್ದು ಇವರಿಗೆ ಜನಜಾಗೃತಿ ವೇದಿಕೆಯಿಂದ ಮಂಜೂರಾದ ಹತ್ತು ಸಾವಿರ ರೂಪಾಯಿಯ ಮಂಜೂರಾತಿ ಪತ್ರವನ್ನು ಕಡಬ ತಾಲ್ಲೂಕು ಜನಜಾಗೃತಿ ಅಧ್ಯಕ್ಷ ಮಹೇಶ್ ಸವಣೂರು ಹತ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ, ಗೋಳಿತಟ್ಟು ವಲಯ ಒಕ್ಕೂಟ ಅಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ನೆಲ್ಯಾಡಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್, ವಲಯ ಮೇಲ್ವಿಚಾರಕರಾದ ಸುಜಾತ.ಬಿ, ಸೇವಾ ಪ್ರತಿನಿಧಿ ವಿಶಾಲಾಕ್ಷಿ, ನೇಮಿರಾಜ್ ಕಲಾಯಿ ಹಾಗೂ ಅಂಭರ್ಜೆ ಪ್ರಗತಿ ಬಂದು ತಂಡದ ಸದಸ್ಯರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!