ಕೊಕ್ಕಡದಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನ

ಕೊಕ್ಕಡದಲ್ಲಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನ

ಕೊಕ್ಕಡ ಬಳಿ ನಿಲ್ಲಿಸಿದ್ದ ಮಾರುತಿ 800 ಕಾರು ಕಳ್ಳತನವಾದ ಮಾಡಿದ ಘಟನೆ ವರದಿಯಾಗಿದೆ.

ಕೊಕ್ಕಡ ನಿವಾಸಿ ಕಿಶೋರ್ ಪೂಜಾರಿ (37ವ) ಎಂಬವರ ದೂರಿನಂತೆ, ಫೆ.25 ರಂದು ರಾತ್ರಿ, ತನ್ನ ಗೆಳೆಯನ ಬಾಬ್ತು ಏಂ 20 ಒಇ 1456 ನೇ ನೋಂದಣೆ ಸಂಖ್ಯೆಯ ಬಿಳಿ ಬಣ್ಣದ ಮಾರುತಿ 800 ಕಾರನ್ನು (ಅಂದಾಜು ಮೌಲ್ಯ 40,000 ) ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಕುಸುಮ ಚಿಕನ್ ಸೆಂಟರ್ ಬಳಿ ನಿಲ್ಲಿಸಿ ಬೆಂಗಳೂರಿಗೆ ತೆರಳಿದ್ದು, ಮರಳಿ ಮಾ.01ರಂದು ಬೆಳಿಗ್ಗೆ ಬಂದು ನೋಡಿದಾಗ, ಕಾರು ನಿಲ್ಲಿಸಿದ್ದ ಸ್ಥಳದಿಂದ ಕಳ್ಳತನವಾಗಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ: 16/2024 ಕಲಂ:379 ಐ ಪಿ ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Leave a Reply

You May Have Missed

error: Content is protected !!