ನೆಲ್ಯಾಡಿ: ಅಲ್ ಬದ್ರಿಯಾ ಮಹಿಳಾ ಶರೀಯತ್ ಕಾಲೇಜು ಮತ್ತು ಆಂಗ್ಲ ಮಾಧ್ಯಮ ಶಾಲೆ ನೂತನ ಆಡಳಿತ ಸಮಿತಿ ರಚನೆ

ನೆಲ್ಯಾಡಿ: ಅಲ್ ಬದ್ರಿಯಾ ಮಹಿಳಾ ಶರೀಯತ್ ಕಾಲೇಜು ಮತ್ತು ಆಂಗ್ಲ ಮಾಧ್ಯಮ ಶಾಲೆ ನೂತನ ಆಡಳಿತ ಸಮಿತಿ ರಚನೆ

ನೆಲ್ಯಾಡಿ: ಇಲ್ಲಿನ ಅಲ್ ಬದ್ರಿಯಾ ಮಹಿಳಾ ಶರೀಯತ್ ಕಾಲೇಜ್ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಮಹಾಸಭೆಯು ಮಾ.1ರಂದು ನೆಲ್ಯಾಡಿ ಹಯತುಲ್ ಇಸ್ಲಾಮ್ ಮದ್ರಸ ಸಭಾಂಗಣದಲ್ಲಿ ನಡೆಯಿತು.
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಖತೀಬರಾದ ಶೌಕತ್ ಅಲೀ ಅಮಾನಿಯವರ ದುವಾದೂಂದಿಗೆ ಸಭೆ ಪ್ರಾರಂಭವಾಯಿತು. ಬದ್ರಿಯಾ ಜಮಾಮಸೀದಿಯ ಅಧ್ಯಕ್ಷರಾದ ಹನೀಫ್ ಸಿಟಿ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ 2024-25ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ನಾಝಿಮ್ ಸಾಹೇಬ್ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಕೆ.ಆರ್, ಉಪಾಧ್ಯಕ್ಷರಾಗಿ ರಝಾಕ್ ಟಿನ್, ಕಾರ್ಯದರ್ಶಿಯಾಗಿ ಸಿದ್ದೀಕ್ ಮಣ್ಣಗುಂಡಿ ಹಾಗೂ ಕೋಶಾಧಿಕಾರಿಯಾಗಿ ಹನೀಫ್ ಬೈಲ್ ಆಯ್ಕೆಯಾದರು. 8 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಕಗೊಂಡರು.

Leave a Reply

You May Have Missed

error: Content is protected !!