ಶಿರಾಡಿ: ಗ್ರಾಮಸಹಾಯಕ ಶೇಖರ ಗೌಡ ಹೃದಯಾಘಾತದಿಂದ ನಿಧನ

ಶಿರಾಡಿ: ಗ್ರಾಮಸಹಾಯಕ ಶೇಖರ ಗೌಡ ಹೃದಯಾಘಾತದಿಂದ ನಿಧನ

ಶಿರಾಡಿ ಗ್ರಾಮದ ಕಳಪ್ಪಾರು ನಿವಾಸಿ, ಶಿರಾಡಿ ಗ್ರಾಮ ಸಹಾಯಕ ಶೇಖರ ಗೌಡ(56ವ.)ರವರು ಮಾ.9ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಂಜೆ 5 ಗಂಟೆ ವೇಳೆಗೆ ಮನೆಗೆಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು ಮನೆಯವರು ತಕ್ಷಣ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ಶೇಖರ ಗೌಡ ಅವರು ಕಳೆದ 30ವರ್ಷಗಳಿಂದ ಶಿರಾಡಿ ಗ್ರಾಮ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ ಮೀನಾಕ್ಷಿ, ಪುತ್ರ ತೇಜಸ್, ಪುತ್ರಿಯರಾದ ತೇಜಸ್ವಿನಿ, ನಿಕ್ಷಿತಾ, ಇಬ್ಬರು ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಅಗಲಿದ್ದಾರೆ.

Previous post

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮುಳಿಯ ಜ್ಯುವೆಲ್ಸ್ ಮತ್ತು ಭಾರತೀಯ ಅಂಚೆ ಇಲಾಖೆ ಸಹಭಾಗಿತ್ವದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ

Next post

ಮಾನಸಿಕ ನೆಮ್ಮದಿಗೆ ಆಧ್ಯಾತ್ಮ ಚಿಂತನೆ ಅಗತ್ಯ: ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ

Leave a Reply

You May Have Missed

error: Content is protected !!