ಡಾ. ಅನುರಾಧಾ ಕುರುಂಜಿಯವರಿಗೆ ಬೆಳ್ತಂಗಡಿ ಗೌಡ ಸಂಘದಿಂದ ಸನ್ಮಾನ

ಡಾ. ಅನುರಾಧಾ ಕುರುಂಜಿಯವರಿಗೆ ಬೆಳ್ತಂಗಡಿ ಗೌಡ ಸಂಘದಿಂದ ಸನ್ಮಾನ

ಸುಳ್ಯದ ಉಪನ್ಯಾಸಕರು ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಡಾ. ಅನುರಾಧಾ ಕುರುಂಜಿಯವರನ್ನು ಬೆಳ್ತಂಗಡಿಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ಗೌಡರ ಯುವ ವೇದಿಕೆ, ಗೌಡರ ತಾಲೂಕು ಮಹಿಳಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಮಾರ್ಚ್ 10ರಂದು ಬೆಳ್ತಂಗಡಿಯ ವಾಣಿ ಪಿ ಯು ಕಾಲೇಜು ಸಭಾಂಗಣದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಸಾಧಕ ಸಮಾಜ ಬಾಂಧವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷರಾದ ಪಿ ಕುಶಾಲಪ್ಪ ಗೌಡ, ಬೆಳ್ತಂಗಡಿಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ಉಷಾ ವೆಂಕಟರಮಣ ಗೌಡ, ಬೆಳ್ತಂಗಡಿಯ ಗೌಡರ ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ ನಿಡ್ವಾಜೆ. ಬೆಳ್ತಂಗಡಿಯ ಗೌಡರ ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ, ಸ ಹಿ ಪ್ರಾ ಶಾಲೆ ಗುರುವಾಯನಕೆರೆಯ ಮುಖ್ಯೋಪಾಧ್ಯಾಯರಾದ ಉಮಾ ಡಿ ಗೌಡ ಮೊದಲಾದವರು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!