ಕೌಕ್ರಾಡಿ: ಉಸಿರಾಟದ ತೊಂದರೆಯಿಂದ ಸಾವು

ಕೌಕ್ರಾಡಿ: ಉಸಿರಾಟದ ತೊಂದರೆಯಿಂದ ಸಾವು

ನೆಲ್ಯಾಡಿ: ಬಿದ್ದು ತಲೆಗೆ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು 1 ದಿನದ ಬಳಿಕ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ ಘಟನೆ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.

ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ನಿವಾಸಿ ಶೀನ ಮುಗೇರ(50ವ.)ಮೃತಪಟ್ಟವರಾಗಿದ್ದಾರೆ. ಶೀನ ಮುಗೇರ ಅವರು ಮಾ.10ರಂದು ಸಂಜೆ 4.30ರ ವೇಳೆಗೆ ನೆಲ್ಯಾಡಿ ಪೇಟೆಗೆ ಹೋದವರು 5.30ಗಂಟೆಗೆ ಮನೆಗೆ ಬಂದಿದ್ದರು. ಈ ವೇಳೆ ಅವರ ತಲೆಯ ಹಿಂಬದಿ ಗಾಯವಾಗಿದ್ದು ಮನೆಯವರು ವಿಚಾರಿಸಿದಾಗ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಬಿದ್ದು ಗಾಯವಾಗಿದೆ ಎಂದು ತಿಳಿಸಿದ್ದರು. ಬಳಿಕ ಅವರನ್ನು ಚಿಕಿತ್ಸೆಗೆ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಅಲ್ಲಿನ ವೈದ್ಯರು ಚಿಕಿತ್ಸೆ ನೀಡಿ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಮನೆಯಲ್ಲಿ ಇದ್ದವರಿಗೆ ಮಾ.11ರ ಮಧ್ಯರಾತ್ರಿ 3.15ರ ವೇಳೆಗೆ ಎದೆಯಲ್ಲಿ ನೆವಸ ಬಂದು ಉಸಿರಾಟಕ್ಕೆ ತೊಂದರೆ ಉಂಟಾಗಿದ್ದು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಶೀನ ಮುಗೇರ ಅವರು ಹೃದಯ ಸಂಬಂದಿ ಅಥವಾ ಇನ್ಯಾವುದೋ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ ಎಂದು ಅವರ ಪುತ್ರ ಜಗದೀಶ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Previous post

ಚಿನ್ನಾಭರಣ ಪರೀಕ್ಷಕನ ವಜಾ ಪ್ರಕರಣ; ಪ್ರಕರಣದ ನಿಗೂಢತೆಯ ಬಯಲಿಗೆ ಆಗ್ರಹ; ಮಾ.18ರಂದು ಕೊಕ್ಕಡದಲ್ಲಿ ಪ್ರತಿಭಟನೆ

Next post

ಶಿಶಿಲ ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರದ ವಾರ್ಷಿಕೋತ್ಸವ ಸಂದರ್ಭದಲ್ಲಿ ಕೆ.ಜಯಕೀರ್ತಿ ಜೈನ್ ಗೆ ಸನ್ಮಾನ

Leave a Reply

You May Have Missed

error: Content is protected !!