ಕಡಬದ ಹೂವಿನ ವ್ಯಾಪಾರಿ ರಮೇಶ್ ಶೆಟ್ಟಿ ನಿಧನ

ಕಡಬದ ಹೂವಿನ ವ್ಯಾಪಾರಿ ರಮೇಶ್ ಶೆಟ್ಟಿ ನಿಧನ

ಕಡಬ: ಇಲ್ಲಿನ ಹೊಯಿಗೆ ಕೆರೆ ನಿವಾಸಿ, ಕಡಬ ದುರ್ಗಾಂಬಿಕ ದೇವಸ್ಥಾನದ ಸಮೀಪ ಹಲವು ವರ್ಷಗಳಿಂದ ಹೂವಿನ ವ್ಯಾಪಾರ ಮಾಡುತ್ತಿದ್ದ ರಮೇಶ್ ಶೆಟ್ಟಿ ಅವರು ಅನಾರೋಗ್ಯದಿಂದ ಮಾ.15ರಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಾಯಿಲೆಗೆ ತುತ್ತಾಗಿದ್ದ ಇವರು ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಮಾ.14 ರಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತರು ಪತ್ನಿ ಶಶಿಕಲಾ ಹಾಗೂ ಸಹೋದರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.ಇವರಿಗೆ ಹಲವಾರು ಸಂಘ ಸಂಸ್ಥೆಗಳು ಆರ್ಥಿಕ ಸಹಾಯ ನೀಡಿ ಚಿಕಿತ್ಸೆಗೆ ನೆರವಾಗಿದ್ದರು.

Leave a Reply

You May Have Missed

error: Content is protected !!