ಆರ್ ಸಿ ಬಿ ಬಿಗಿ ದಾಳಿಗೆ ನಲುಗಿದ ಡೆಲ್ಲಿ: 113 ಕ್ಕೆ ಆಲೌಟ್!

ಆರ್ ಸಿ ಬಿ ಬಿಗಿ ದಾಳಿಗೆ ನಲುಗಿದ ಡೆಲ್ಲಿ: 113 ಕ್ಕೆ ಆಲೌಟ್!

ಅರುಣ್‌ ಜೇಟ್ಲಿ ಮೈದಾನದಲ್ಲಿ ರವಿವಾರ ನಡೆಯುತ್ತಿರುವ ವನಿತಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಫೈನಲ್ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬಿಗಿ ಬೌಲಿಂಗ್ ದಾಳಿ ನಡೆಸಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು 113 ರನ್ ಗಳಿಗೆ ಆಲೌಟ್ ಮಾಡಿದೆ.

ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಿಗಿ ದಾಳಿ ನಡೆಸಿದ ಆರ್ ಸಿಬಿ ವನಿತೆಯರು ಘಾತಕವಾಗಿ ಕಾಡಿದರು.

ಆರಂಭಿಕ ಜೋಡಿ ಮೊದಲ 7 ಓವರ್ ಗಳಲ್ಲಿ 64 ಉತ್ತಮ ಜತೆಯಾಟವಾಡಿದರಾದರೂ ತಂಡ ಕುಸಿದು ಹೋಯಿತು. ಡೆಲ್ಲಿ ನಾಯಕಿ ಮೆಗ್ ಲ್ಯಾನಿಂಗ್ 23, ಶಫಾಲಿ ವರ್ಮ 44 ರನ್ ಗಳಿಸಿದರು. ರಾಧಾ ಯಾದವ್ 12 ಮತ್ತು ಅರುಂಧತಿ ರೆಡ್ಡಿ 10 ರನ್ ಹೊರತು ಪಡಿಸಿ ಉಳಿದ ಆಟಗಾರ್ತಿಯರೆಲ್ಲ ಪೆವಿಲಿಯನ್ ಪರೇಡ್ ನಡೆಸಿದರು.

ಬಿಗಿ ದಾಳಿ ನಡೆಸಿದ ಶ್ರೇಯಾಂಕಾ ಪಾಟೀಲ್ 4, ಸೋಫಿ ಮೊಲಿನೆಕ್ಸ್ 3, ಆಶಾ ಶೋಭನ 2 ವಿಕೆಟ್ ಕಬಳಿಸಿದರು.

Leave a Reply

You May Have Missed

error: Content is protected !!