ನಿಡ್ಲೆ: ಅಕ್ರಮ ವೈನ್ ದಾಸ್ತಾನು ಸ್ಟೋರ್ ಮೇಲೆ ಅಬಕಾರಿ ದಾಳಿ; ರೂ.2 ಲಕ್ಷ ಮೌಲ್ಯದ ವೈನ್ ವಶ

ನಿಡ್ಲೆ: ನಿಷೇಧಿತ ಹೋಮ್ ಮೇಡ್ ವೈನ್ ಮಾರಾಟ ಮಾಡುತ್ತಿದ್ದ ಅಡ್ಡೆ ಮೇಲೆ ಬೆಳ್ತಂಗಡಿ ಅಬಕಾರಿ ದಳದದವರು ದಾಳಿ ನಡೆಸಿದ್ದಾರೆ. ನಿಡ್ಲೆ ಗ್ರಾಮದ ಜಿತೇಂದ್ರ ಎಂಬವರ ಸ್ಟೋರ್ ನಲ್ಲಿ ಹೋಮ್ ಮೇಡ್ ವೈನ್ ನನ್ನು ಹೊರ ಜಿಲ್ಲೆಯಿಂದ ಖರೀದಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅಬಕಾರಿ ದಳದ ಇನ್ಸ್ಪೆಕ್ಟರ್ ಲಕ್ಷ್ಮಣ್ ಉಪ್ಪಾರ್ ಮತ್ತು ತಂಡ ಮಾ.20 ರಂದು ಸಂಜೆ 4 ಗಂಟೆಗೆ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಮಾರಾಟ ಮಾಡಲು ದಾಸ್ತಾನು ಮಾಡಿದ್ದ ಹೋಮ್ ಮೇಡ್ ವೈನ್ 306 ಲೀಟರ್ ವಶಪಡಿಸಿಕೊಂಡಿದ್ದು. ಇದರ ಮೌಲ್ಯ ಸುಮಾರು 2,01,960 ಲಕ್ಷ ರೂಪಾಯಿ ಅಗಿದ್ದು.ಆರೋಪಿಯನ್ನು ವಶಕ್ಕೆ ಪಡೆದು ಆತನ ವಿರುದ್ಧ ಬೆಳ್ತಂಗಡಿ ಅಬಕಾರಿ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಅಬಕಾರಿ ದಳದ ಇನ್ಸ್ಪೆಕ್ಟರ್ ಲಕ್ಷಣ್ ಉಪ್ಪಾರ್, ಹೆಡ್ ಕಾನ್ಸ್‌ಟೇಬಲ್ ಬೋಜ ಕೆ, ವಿನಯ್, ಶಿವಶಂಕರಪ್ಪ ಮತ್ತು ವಾಹನ ಚಾಲಕ ನವೀನ್ ಭಾಗವಹಿಸಿದರು.
















Leave a Reply