ನೆಲ್ಯಾಡಿ: ಪದವಿ ಪ್ರಧಾನ ಸಮಾರಂಭ

ನೆಲ್ಯಾಡಿ: ಪದವಿ ಪ್ರಧಾನ ಸಮಾರಂಭ

ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಕಿಂಡರ್ ಸಿಟಿ ಪುಟಾಣಿಗಳ ಪದವಿ ಪ್ರಧಾನ ಸಮಾರಂಭ ಬುಧವಾರ ನಡೆಯಿತು.

ಕುಂತೂರು ಮಾರ್ ಇವನಿಯಾಸ್ ಮುಖ್ಯ ಶಿಕ್ಷಕಿ ರೆ.ಸಿ.ಅಲೆನ್.ಡಿ.ಎಂ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪುಟಾಣಿಗಳಿಗೆ ಶುಭ ಹಾರೈಸಿದರು. ಸಂಸ್ಥೆಯ ಸಂಚಾಲಕ ರೆ.ಫಾ.ಜೈಸನ್ ಸೈಮನ್ ಒಐಸಿ ಪುಟಾಣಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ಬೆಥನಿ ವಿದ್ಯಾಸಂಸ್ಥೆಯ ಪ್ರಿನ್ಸಿಪಾಲ್ ರೆ.ಫಾ.ಡಾ.ವರ್ಗಿಸ್ ಕೈಪನಡ್ಕ ಒಐಸಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಶುಭ ಹಾರೈಸಿದರು. ಉಪಪ್ರಿನ್ಸಿಪಾಲ್ ಜೋಸ್.ಎಂ.ಜೆ, ಕಿಂಡರ್ ಗಾರ್ಡನ್ ಮುಖ್ಯಸ್ಥೆ ಗೆಸ್ಸಿ ಉಪಸ್ಥಿತರಿದ್ದರು.

ಪುಟಾಣಿ ಶ್ವಿನನ್ ಸ್ವಾಗತಿಸಿದರು. ಪುಟಾಣಿ ಅಭಿಷೀತ್ ವಂದಿಸಿದರು. ಪುಟಾಣಿ ಅನನ್ಯ ಈಶಲ್ ಡೆಸ ಕಾರ್ಯಕ್ರಮ ನಿರೂಪಿಸಿದರು.

Leave a Reply

You May Have Missed

error: Content is protected !!