ಕೊಣಾಲು ಸರಕಾರಿ ಪ.ಪೂ.ಕಾಲೇಜಿಗೆ ಶೇ.100 ಫಲಿತಾಂಶ

ಕೊಣಾಲು ಸರಕಾರಿ ಪ.ಪೂ.ಕಾಲೇಜಿಗೆ ಶೇ.100 ಫಲಿತಾಂಶ

ನೆಲ್ಯಾಡಿ: 2023-24ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಫಲಿತಾಂಶ ಪ್ರಕಟಗೊಂಡಿದ್ದು ಕೊಣಾಲು ಸರಕಾರಿ ಪ.ಪೂ.ಕಾಲೇಜಿಗೆ ಶೇ.100 ಫಲಿತಾಂಶ ಬಂದಿದೆ.

ಕಾಲೇಜಿನಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗಗಳಿದ್ದು ಎರಡೂ ವಿಭಾಗಗಳಿಂದ ಒಟ್ಟು 23 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ತೇರ್ಗಡೆಗೊಂಡಿದ್ದಾರೆ.

ಕಲಾ ವಿಭಾಗದಿಂದ 11 ಹಾಗೂ ವಾಣಿಜ್ಯ ವಿಭಾಗದಲ್ಲಿ 12 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕಲಾ ವಿಭಾಗದಲ್ಲಿ ಭವ್ಯಶ್ರೀ 552 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಜಯಶ್ರೀ ವೈ.ಎಸ್. 568, ಕೈರುನ್ನಿಸಾ 560, ರಮ್ಲತ್ 544 ಹಾಗೂ ಕಾರ್ತಿಕ್ ಕೆ.ಆರ್.530 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

Leave a Reply

You May Have Missed

error: Content is protected !!