ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ದಿನಾಚರಣೆ

ಕೆ ಎಸ್ ಎಸ್ ಕಾಲೇಜಿನಲ್ಲಿ ಅಂಬೇಡ್ಕರ್ ಜಯಂತಿ ದಿನಾಚರಣೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆ ಹಾಗೂ ಗೀತ ನಮನ ಕಾರ್ಯಕ್ರಮವನ್ನು ಏ.16ರಂದು ನಡೆಯಿತು.

ಕುಕ್ಕೆ ಸುಬ್ರಹ್ಮಣ್ಯೇಶ್ವರ ದೇವಾಲಯದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾಲೇಜಿನ ಕಾರ್ಯದರ್ಶಿ ಡಾ.ನಿಂಗಯ್ಯ ಇವರು ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ದಿನೇಶ್.ಪಿ.ಟಿ, ಐ.ಕ್ಯು.ಎಸ್.ಸಿ ಸಂಯೋಜಕಿ ಲತಾ.ಬಿ.ಟಿ ಹಾಗೂ ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿಯ ಸಂಯೋಜಕ ಡಾ.ದಿನೇಶ್.ಕೆ ಹಾಗೂ ಸಾಂಸ್ಕೃತಿಕ ತಂಡದ ನಿರ್ದೇಶಕವಿನ್ಯಾಸ.ಹೆಚ್ ಉಪಸ್ಥಿತರಿದ್ದರು.

ಡಾ.ಬಿ.ಆರ್ ಅಂಬೇಡ್ಕರ್ ರವರಿಗೆ ಪುಷ್ಪಾರ್ಚನೆ ಹಾಗೂ ಗೀತನಮನದ ಮೂಲಕ ಗೌರವವನ್ನು ಅರ್ಪಿಸಲಾಯಿತು. ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿಯ ಸದಸ್ಯ ಪುಷ್ಪ.ಡಿ ನಿರೂಪಿಸಿದರು. ಮಧುರ.ಕೆ ವಂದಿಸಿದರು.

Previous post

ಉಜಿರೆ: ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಪತ್ನಿ ನಿಧನ

Next post

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾ. ನೆಲ್ಯಾಡಿ ವಲಯ ಅಧ್ಯಕ್ಷರು ಮತ್ತು ಸೇವಾಪ್ರತಿನಿಧಿಗಳ ಸಭೆ

Leave a Reply

You May Have Missed

error: Content is protected !!