ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಸನ್ಯಾಸತ್ವ ಸ್ವೀಕರಿಸಿದ ಸಿಸ್ಟೆರ್ ಟೆಸ್ಸಾ ಗೆ ಸನ್ಮಾನ

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನಲ್ಲಿ ಸನ್ಯಾಸತ್ವ ಸ್ವೀಕರಿಸಿದ ಸಿಸ್ಟೆರ್ ಟೆಸ್ಸಾ ಗೆ ಸನ್ಮಾನ

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಯಾಸ ವೃತ ಸ್ವೀಕರಿಸಿದ ವಂ.ಭಗಿನಿ.ಸಿಸ್ಟೆರ್ ಟೆಸ್ಸಾ ಅವರನ್ನು ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಸನ್ಮಾಸಿ, ಕಾಲವನ್ನು ಮೆಟ್ಟಿ ನಿಲ್ಲುವ ಆದ್ಯಾತ್ಮ ಶಕ್ತಿಯನ್ನು ಪಡೆದರೆ ಮಾತ್ರ ಸನ್ಯಾಸ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಚರ್ಚ್ ನ ವಂ.ಫಾ.ಶಾಜಿ ಮ್ಯಾಥ್ಯು ತಮ್ಮ ಅಭಿನಂದನಾ ಸಂದೇಶದಲ್ಲಿ ತಿಳಿಸಿದರು.

ಎಂಟು ವರ್ಷಗಳ ತರಬೇತಿಯನ್ನು ಮುಗಿಸಿ ಕೇರಳದ ಪೇರಾವೂರ್ ನ ತೊಂಡಿಯ ಮಾತೃ ಆಶ್ರಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಪವಿತ್ರ ಹೃದಯದ ಸನ್ಯಾಸ ಬದುಕಿನ ದೀಕ್ಷೆಯನ್ನು ತಲಶೇರಿ ಮಹಾಧರ್ಮ ಪ್ರಾಂತ್ಯದ ಆರ್ಚ್ ಬಿಷಪ್ ಜೋಸೆಫ್ ಪಾ0ಪ್ಲಾನಿ ನೀಡಿದರು.

ಇವರು ನೆಲ್ಯಾಡಿಯ ಸನ್ನಂಪಾಡಿ ವಾಯಯಿಲ್ ಸಣ್ಣಿ ಮತ್ತು ಚಿನ್ನಮ್ಮ ದಂಪತಿಗಳ ಹಿರಿಯ ಪುತ್ರಿ

ಟ್ರಸ್ಟಿಗಳಾದ ಈಪನ್ ವರ್ಗೀಸ್, ಬಿಜು ಪೆರುoಪಲ್ಲಿ, ಜೋಬಿನ್ ಪರ ಪರಾಗತ್, ಸಿಸ್ಟೆರ್ ಲಿಸ್ ಮ್ಯಾಥ್ಯು ಎಸ್ ಎಚ್, ಉಪಸ್ಥಿತರಿದ್ದರು. ಕಾರ್ಯದರ್ಶಿ ಜೆಸ್ಸಿ ನಿರೂಪಿಸಿದರು.

Leave a Reply

You May Have Missed

error: Content is protected !!