ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ತನ್ನ ಸಹೋದರಿಯ ಮದುವೆ ಸಂಭ್ರಮದ ಕಾರ್ಯಕ್ರಮ ನೃತ್ಯ ಮಾಡುತ್ತಿದ್ದ ಯುವತಿಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿರುವುದು ವರದಿಯಾಗಿದೆ.

ಶುಕ್ರವಾರ(ಏ.26 ರಂದು) ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ಹರಿದಾಡಿದೆ.

ರಿಮ್ಶಾ(18) ಎನ್ನುವ ಯುವತಿ ತನ್ನ ಸಹೋದರಿಯ ಹಳದಿ ಸಮಾರಂಭ(ವಿವಾಹಪೂರ್ವ ಕಾರ್ಯಕ್ರಮ) ನಲ್ಲಿ ನೃತ್ಯ ಮಾಡುತ್ತಿದ್ದಳು. ಅವರೊಂದಿಗೆ ಕುಟುಂಬಸ್ಥರು ನೃತ್ಯ ಮಾಡುತ್ತಿದ್ದರು. ಸಂತಸದ ಸಂದರ್ಭದಲ್ಲಿ ಹೆಜ್ಜೆ ಹಾಕುತ್ತಿದ್ದ ರಿಮ್ಶಾ ಎದೆಯ ಮೇಲೆ ಕೈಯಿಟ್ಟ ಕೆಲವೇ ಸೆಕೆಂಡ್‌ ಗಳಲ್ಲಿ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅವರು ಹೃದಯಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಮದುವೆ ಸಮಾರಂಭ ಹೊರಗಿನ ಯಾವುದೇ ಅತಿಥಿಗಳಿಲ್ಲದೆ, ಆತ್ಮೀಯರ ಸಮ್ಮುಖದಲ್ಲಿ ಸರಳವಾಗಿ ನೆರವೇರಿದೆ.

Leave a Reply

You May Have Missed

error: Content is protected !!