ಶಿಶಿಲ ಗ್ರಾಮ ಪಂಚಾಯತ್ ವತಿಯಿಂದ ಹತ್ಯಡ್ಕ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್ ಹಾಗೂ ತಂಡದವರಿಗೆ ಸನ್ಮಾನ

ಶಿಶಿಲ ಗ್ರಾಮ ಪಂಚಾಯತ್ ವತಿಯಿಂದ ಹತ್ಯಡ್ಕ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್ ಹಾಗೂ ತಂಡದವರಿಗೆ ಸನ್ಮಾನ

ನೇಸರ 27: ಶಿಶಿಲ ಗ್ರಾಮ ಪಂಚಾಯತ್ ವತಿಯಿಂದ ಕೋವಿಡ್ ಸಮಯದಲ್ಲಿ ಮುಂಚೂಣಿಯಲ್ಲಿ ನಿಂತು ಪ್ರಥಮ ಡೋಸ್ ಲಸಿಕೆಯನ್ನು ನೂರು ಶೇಕಡಾ ಜನರಿಗೆ ತಲುಪಿಸಲು ಕಾರಣೀಕರ್ತರಾದ ಹತ್ಯಡ್ಕ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಕಾಶ್ ಹಾಗೂ ತಂಡವನ್ನು, ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸಂದೀಪ್ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಶಿಶಿಲ ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷ ವಿಮಲಾ. ಡಿ, ಸದಸ್ಯರಾದ ಸುದಿನ್, ಯಶೋಧರ ಕೆ.ವಿ, ಲಲಿತಾ, ಕಮಲಾಕ್ಷಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

Leave a Reply

You May Have Missed

error: Content is protected !!