ಕಾರುಗಳು ಮಧ್ಯೆ ಅಪಘಾತ, ಇಬ್ಬರಿಗೆ ಗಾಯ

ಕಾರುಗಳು ಮಧ್ಯೆ ಅಪಘಾತ, ಇಬ್ಬರಿಗೆ ಗಾಯ

ಕಾರುಗಳೆರಡು ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ಬಿ.ಸಿ.ರೋಡ್ ನಾರಾಯಣ ಗುರು ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ವೇಳೆ ನಡೆದಿದೆ.

ನರಿಕೊಂಬು ನಿವಾಸಿ ಸ್ವಾತಿ ಹಾಗೂ ಸುನೀಲ್ ಗಾಯಗೊಂಡವರು. ಅನಿಲ್ ಎಂಬವರು ಅವರ ಅತ್ತಿಗೆ ಸ್ವಾತಿಯವರನ್ನು ಪಂಜಿಕಲ್ಲುವಿನಿಂದ ನರಿಕೊಂಬು ಮನೆಗೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ.

ಸುನೀಲ್ ಕುಟುಂಬದವರ ಜೊತೆ ಕಾರಿನಲ್ಲಿ ದೇವಸ್ಥಾನಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅನಿಲ್ ಅವರು ಪ್ರಯಾಣಿಸುತ್ತಿದ್ದ ಕಾರು ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಎರಡು ಕಾರುಗಳ ಮುಂಭಾಗ ಅಪಘಾತದಲ್ಲಿ ಜಖಂಗೊಂಡಿದೆ. ಕೆಲ ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು. ಸ್ಥಳಕ್ಕೆ ಬಂಟ್ವಾಳ ಸಂಚಾರಿ ಪೊಲೀಸರು ಆಗಮಿಸಿ ಟ್ರಾಫಿಕ್ ಸಮಸ್ಯೆ ಪರಿಹರಿಸಿದರು.

Leave a Reply

You May Have Missed

error: Content is protected !!