ಗುಂಡ್ಯ: ನಿಲ್ಲಿಸಿದ್ದ ಲಾರಿ ಮೇಲೆ ಬಿದ್ದ ಮರದ ಗೆಲ್ಲು

ಗುಂಡ್ಯ: ನಿಲ್ಲಿಸಿದ್ದ ಲಾರಿ ಮೇಲೆ ಬಿದ್ದ ಮರದ ಗೆಲ್ಲು

ಗುಂಡ್ಯದ ಚೆಕ್ ಪೋಸ್ಟ್ ಬಳಿ ನಿಲ್ಲಿಸಿದ್ದ ಲಾರಿ ಮೇಲೆ ಮರದ ಗೆಲ್ಲು ಬಿದ್ದು ಹಾನಿ ಸಂಭವಿಸಿದ ಘಟನೆ ಮೇ 12ರಂದು ಸಂಜೆ ನಡೆದಿದೆ.

ಗುಂಡ್ಯದಲ್ಲಿ ಲಾರಿ ನಿಲ್ಲಿಸಿ ಅದರ ಚಾಲಕ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ್ದರು. ಸಂಜೆ ಸುರಿದ ಭಾರೀ ಗಾಳಿ ಹಾಗೂ ಮಳೆಗೆ ಮರದ ಗೆಲ್ಲು ಲಾರಿಯ ಮೇಲೆ ಬಿದ್ದು ಹಾನಿ ಸಂಭವಿಸಿದೆ.

ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್‌ಸ್ಟೇಬಲ್ ಕುಶಾಲಪ್ಪ ನಾಯ್ಕ್, ಸಿಬ್ಬಂದಿ ನಾಗರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Leave a Reply

You May Have Missed

error: Content is protected !!