ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ ಮಾಸಿಕ ಸಭೆ

ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ ಮಾಸಿಕ ಸಭೆ

ನೆಲ್ಯಾಡಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಗ್ರಾಮ ಸಮಿತಿ ಇದರ ಮಾಸಿಕ ಸಭೆ ನೆಲ್ಯಾಡಿ ಬಿರ್ವ ಆಡಿಟೋರಿಯಮ್ ಹಾಲ್ ನಡೆಯಿತು.

ಸಭೆಯಲ್ಲಿ ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಸಂಘದ ಅಧ್ಯಕ್ಷ ಮೋಹನ್ ಕುಮಾರ್.ಡಿ ಅಧ್ಯಕ್ಷತೆ ವಹಿಸಿದ್ದರು. ವಲಯ ಸಂಚಾಲಕರಾದ ಡಾ.ಸದಾನಂದ ಕುಂದರ್‌ರವರು ಸಂದರ್ಭೋಚಿತವಾಗಿ ಮಾತನಾಡಿದರು. ಕೋಶಾಧಿಕಾರಿ ಲೋಕೇಶ್ ಬಾಣಜಾಲು ಲೆಕ್ಕ ಪತ್ರ ಮಂಡಿಸಿದರು. ಕಾರ್ಯದರ್ಶಿ ಜನಾರ್ದನ ಬಾಣಜಾಲು ವರದಿ ವಾಚಿಸಿದರು. ಮೋಹನ್‌ಕುಮಾರ್.ಡಿ.,ಸ್ವಾಗತಿಸಿ, ಲಿತಿನ್‌ಕುಮಾರ್ ವಂದಿಸಿದರು. ಸುಂದರ ಬಿ, ತುಳಸಿಧರನ್, ಶಿವರಾಜ್, ಚಂದ್ರಶೇಖರ್ ಬಿ, ಮಹೇಶ್.ಬಿ, ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ದೀಕ್ಷಾ ಸಾಲ್ಯಾನ್, ಲೀಲಾವತಿ, ನೋಣಯ್ಯ ಅಂಬರ್ಜೆ ಸಭೆಯಲ್ಲಿ ಉಪಸ್ಥಿತರಿದ್ದು ಸೂಕ್ತ ಸಲಹೆ ಸೂಚನೆ ನೀಡಿದರು.

Leave a Reply

You May Have Missed

error: Content is protected !!