ಬೆಥನಿ ನೂಜಿಬಾಳ್ತಿಲ ಶಾಲಾ ಪ್ರಾರಂಭೋತ್ಸವ

ಬೆಥನಿ ನೂಜಿಬಾಳ್ತಿಲ ಶಾಲಾ ಪ್ರಾರಂಭೋತ್ಸವ

ಬೆಥನಿ ನೂಜಿಬಾಳ್ತಿಲ ಶಾಲಾ ಪ್ರಾರಂಭೋತ್ಸವ ಮೇ 31ರಂದು ಬಹಳ ವಿಜ್ರಂಭಣೆಯಿಂದ ನೆರವೇರಿತು.

ಸಂಸ್ಥೆಯ ನಿರ್ದೇಶಕರಾದ ಫಾದರ್ ವಿಜೋಯ್ ವರ್ಗೀಸ್ ಒಐಸಿ, ಫಾ. ಐಸಕ್ ಸಾಮೂವೆಲ್ ಒಐಸಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಗೌಡ ಗೋಳ್ತಿಮಾರ್, ಉಪಾಧ್ಯಕ್ಷೆ ಭಾರತಿ, ನೂಜಿಬಾಳ್ತಿಲ ಗ್ರಾ.ಪಂ.ಸದಸ್ಯ ಜೋಸೆಫ್, ಸಂಸ್ಥೆಯ ಪ್ರಾಂಶುಪಾಲ ಜಾರ್ಜ್.ಟಿ.ಎಸ್, ಮುಖ್ಯಗುರುಗಳಾದ ಥಾಮಸ್.ಏ.ಕೆ, ಉಪನ್ಯಾಸಕ ವೃಂದ, ಶಿಕ್ಷಕ ವೃಂದ, ಶಿಕ್ಷಕೇತರರು, ಪಾಲಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪುಸ್ತಕ ವಿತರಣೆ , ಮನೋರಂಜನ ಆಟಗಳನ್ನು ನಡೆಸಿದರು.

ಸಂಸ್ಥೆಗೆ ಹೊಸದಾಗಿ ಸೇರಿದ ಎಲ್ಲಾ ವಿದ್ಯಾರ್ಥಿಗಳಿಗೆ ಕಿರು ಕಾಣಿಕೆಯನ್ನು ನೀಡಿ ಸ್ವಾಗತಿಸಲಾಯಿತು. ಆತ್ಮಿಕ ಸ್ವಾಗತಿಸಿದರು, ಲಾವಣ್ಯ ವಂದಿಸಿದರು. ಚೈತ್ರ ನಿರೂಪಿಸಿದರು.

Leave a Reply

You May Have Missed

error: Content is protected !!