ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಕನ್ನಡ ಸಾಹಿತಿ ಜೆಸ್ಸಿ ಪಿ.ವಿ ಸನ್ಮಾನ

ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಕನ್ನಡ ಸಾಹಿತಿ ಜೆಸ್ಸಿ ಪಿ.ವಿ ಸನ್ಮಾನ

ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಚರ್ಚ್ ನ ಸಂಡೆ ಸ್ಕೂಲ್ ಪ್ರಾರಂಭೋತ್ಸವದಂದು ಪ್ರತಿಭೋತ್ಸದಲ್ಲಿ ಸ್ಥಳೀಯ ಕನ್ನಡ ಲೇಖಕಿ ಜೆಸ್ಸಿ ಪಿ.ವಿ ಗೆ ಸಂತ ಅಲ್ಫೋನ್ಸ ಚರ್ಚ್ ನೆಲ್ಯಾಡಿ ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸನ್ಮಾನಿಸಲಾಯಿತು.

ಜೆಸ್ಸಿ ಪಿ.ವಿ ಅವರು ಕನ್ನಡ ಮತ್ತು ಆಂಗ್ಲ ಬಾಷೆಗಳಲ್ಲಿ ಸ್ನಾತಕೋತ್ತರ ಪದವಿ ಯನ್ನು ಪಡೆದು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಇಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆಯಲ್ಲಿದ್ದಾರೆ.

ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಲೇಖನ, ಕತೆ, ಕವನಗಳು ಪ್ರಕಟವಾಗಿವೆ. ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಆಕಾಶವಾಣಿಯಲ್ಲಿ ಭಾಷಣಗಳು ಪ್ರಸಾರವಾಗಿವೆ.

Previous post

ಕಳೆಂಜ ಬಿಜೆಪಿ ಮುಖಂಡನ ಕೊಲೆ‌ ಯತ್ನ ಪ್ರಕರಣ; ಆರೋಪಿ ಕಾಂಗ್ರೆಸ್ ಮುಖಂಡ ಕುಶಾಲಪ್ಪ ಗೌಡ ಬಂಧನ

Next post

ಉಪ್ಪಿನಂಗಡಿ ಜೇಸಿ ಲವೀನಾ ಪಿಂಟೊ” ಜೇಸಿಐ ಅತ್ಯುತ್ತಮ ರನ್ನರ್ ಘಟಕಾಧ್ಯಕ್ಷೆ ಪ್ರಶಸ್ತಿ ಮತ್ತು ಘಟಕಕ್ಕೆ “ಗೋಲ್ಡನ್ ಘಟಕ ಪ್ರಶಸ್ತಿ”

Leave a Reply

You May Have Missed

error: Content is protected !!