ಉಪ್ಪಿನಂಗಡಿ: ಅಂಚೆಪಾಲಕ ರಮೇಶ್ ಗೌಡರಿಗೆ ಜೇಸಿಐ ಮೌನ ಸಾಧಕ ಪುರಸ್ಕಾರ

ಉಪ್ಪಿನಂಗಡಿ: ಜೇಸಿಐ ಉಪ್ಪಿನಂಗಡಿ ಘಟಕದ ವತಿಯಿಂದ ಜೂನ್ ತಿಂಗಳ ಮೌನ ಸಾಧಕರ ಪುರಸ್ಕಾರವನ್ನು 34- ನೆಕ್ಕಿಲಾಡಿ ಗ್ರಾಮದಲ್ಲಿ ಅಂಚೆ ಪಾಲಕರಾಗಿ 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಮೇಶ್ ಗೌಡ ಬೇರಿಕೆ ಇವರ ಸೇವೆಯನ್ನು ಗುರುತಿಸಿ ಮೌನ ಸಾಧಕ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜೇಸಿ ಪ್ರಶಾಂತ್ ಕುಮಾರ್ ರೈ, ಪೂರ್ವಾಧ್ಯಕ್ಷ ಜೇಸಿ ಮೋನಪ್ಪ ಪಮ್ಮನಮಜಲು, ಪೂರ್ವಾವಲಯಾಧಿಕಾರಿ ಜೇಸಿ ಮೋಹನ್ ಚಂದ್ರ ತೋಟದ ಮನೆ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷೆ ಲವೀನಾ ಪಿಂಟೊ ಅಧ್ಯಕ್ಷೆ ವಹಿಸಿದ್ದರು. ಕಾರ್ಯದರ್ಶಿ ಜೇಸಿ ಸುರೇಶ್ ಸ್ವಾಗತಿಸಿ,ವಂದಿಸಿದರು.
























Leave a Reply